ADVERTISEMENT

ವಿದೇಶಿ ಪ್ರಯಾಣಿಕರ ಮೇಲೆ ನಿಗಾ: ಡಾ. ಶರಣಬಸಪ್ಪ ಗಣಜಲಖೇಡ

ಹೊಸ ತಳಿ ಪತ್ತೆಯಾದ ಪ್ರಯುಕ್ತ ಆರೋಗ್ಯಾಧಿಕಾರಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2021, 4:50 IST
Last Updated 30 ನವೆಂಬರ್ 2021, 4:50 IST
ಶರಣಬಸಪ್ಪ
ಶರಣಬಸಪ್ಪ   

ಕಲಬುರಗಿ: ಕೋವಿಡ್ ಹೊಸ ತಳಿ ಓಮೈಕ್ರಾನ್‌ ಪತ್ತೆಯಾದ ಪ್ರಯುಕ್ತ ನಗರಕ್ಕೆ ವಿದೇಶದಿಂದ ಬರುವವರ ಮೇಲೆ ನಿಗಾ ವಹಿಸಲಾಗಿದೆ. ಜೊತೆಗೆ ನಿತ್ಯ 1500 ಕೋವಿಡ್‌ ಟೆಸ್ಟ್‌ ಮಾಡುವುದು ಮುಂದುವರಿದಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶರಣಬಸಪ್ಪ ಗಣಜಲಖೇಡ ತಿಳಿಸಿದರು.

ಈ ಕುರಿತು ಸೋಮವಾರ ಪ್ರತಿಕ್ರಿಯೆ ನೀಡಿದ ಅವರು, ‘ಕೋವಿಡ್‌ ಓಮೈಕ್ರಾನ್ ಹೊಸ ತಳಿ ಕಾಣಿಸಿಕೊಂಡ ದೇಶದಿಂದ ಇಲ್ಲಿಯವರೆಗೆ ಯಾರೊಬ್ಬರೂ ಬಂದಿಲ್ಲ’ ಎಂದರು.

‘ಲಸಿಕೆ ವಿತರಣೆಯ ವೇಗ ಹೆಚ್ಚಿಸಲು 700 ಸಿಬ್ಬಂದಿಯನ್ನೊಳಗೊಂಡ ಹಲವು ತಂಡಗಳನ್ನು ರಚಿಸಲಾಗಿದ್ದು, ಮನೆ ಮನೆಗೆ ತೆರಳಿ ಜನರ ಮನವೊಲಿಸಿ ಲಸಿಕೆ ನೀಡಲಿದ್ದಾರೆ. ಜಿಲ್ಲೆಯಲ್ಲಿ ಮೊದಲ ಡೋಸ್ ಪಡೆದವರ ಸಂಖ್ಯೆ ಶೇ 83ರಷ್ಟಾಗಿದ್ದು, ಎರಡನೇ ಡೋಸ್ ಪಡೆದವರು ಶೇ 37ರಷ್ಟಿದ್ದಾರೆ. ಲಸಿಕೆ ಪಡೆಯಲು ನಿರಾಕರಿಸುತ್ತಿರುವುದು ಹಾಗೂ ಗುಳೆ ಹೋಗಿರುವುದರಿಂದ ಎರಡನೇ ಡೋಸ್ ಪ್ರಮಾಣ ಕಡಿಮೆಯಾಗಿದೆ’ ಎಂದು ಹೇಳಿದರು.

ADVERTISEMENT

ಜಿಲ್ಲೆಯಲ್ಲಿ ಸೋಂಕು ನಿಯಂತ್ರಣಕ್ಕೆ ಬಂದಿದೆ ಎಂದು ಭಾವಿಸಿ ಸುರಕ್ಷಾ ಕ್ರಮಗಳನ್ನು ಬಿಡಬಾರದು. ಮಾಸ್ಕ್ ಧರಿಸುವ, ಪರಸ್ಪರ ಅಂತರ ಕಾಯ್ದುಕೊಳ್ಳುವುದನ್ನು ಮುಂದುವರಿಸಬೇಕು ಎಂದು ಗಣಜಲಖೇಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.