ADVERTISEMENT

ಗಡಿಕೇಶ್ವಾರ ಭೂಕಂಪನ: ಸಮಸ್ಯೆ ಆಲಿಸಿದ ಆರ್.ಅಶೋಕ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2021, 11:00 IST
Last Updated 19 ಅಕ್ಟೋಬರ್ 2021, 11:00 IST
ಗಡಿಕೇಶ್ವಾರದಲ್ಲಿ ಮಂಗಳವಾರ ಸಚಿವ ಆರ್.ಅಶೋಕ ಅವರು ಗ್ರಾಮದ ಮಹಿಳೆಯರ ಸಮಸ್ಯೆ ಆಲಿಸಿದರು
ಗಡಿಕೇಶ್ವಾರದಲ್ಲಿ ಮಂಗಳವಾರ ಸಚಿವ ಆರ್.ಅಶೋಕ ಅವರು ಗ್ರಾಮದ ಮಹಿಳೆಯರ ಸಮಸ್ಯೆ ಆಲಿಸಿದರು   

ಗಡಿಕೇಶ್ವಾರ: ಕಂದಾಯ ಸಚಿವ ಆರ್.ಅಶೋಕ ಅವರು ಮಂಗಳವಾರ, ಚಿಂಚೋಳಿ ತಾಲ್ಲೂಕಿನ ಭೂಕಂಪನ‌ ಪೀಡಿತ ಗಡಿಕೇಶ್ವರ ಗ್ರಾಮಕ್ಕೆ ಭೇಟಿ‌ ನೀಡಿ ಸಾರ್ವಜನಿಕರ ಕುಂದುಕೊರತೆ ಆಲಿಸಿದರು.

'ಈ ಲಘು ಭೂಕಂಪನದಿಂದ ಏನೂ ಅಪಾಯವಿಲ್ಲ ಇಂದು ವಿಜ್ಞಾನಿಗಳು ಹೇಳಿದ್ದಾರೆ. ಜನರು ಭಯಪಡಬೇಕಿಲ್ಲ. ಸರ್ಕಾರ ನಿಮ್ಮೊಂದಿಗೆ ಇದೆ. ಈಗಾಗಲೇ ಅಧ್ಯಯನ ನಡೆದಿದೆ. ಇದರ ಪೂರ್ಣ ವರದಿ ಬಂದ ಮೇಲೆ ಶಾಶ್ವತ ಪರಿಹಾರ ಮಾರ್ಗ ಕಂಡುಕೊಳ್ಳಲಾಗುವುದು' ಎಂದು ಸಚಿವ ಭರವಸೆ ನೀಡಿದರು.

ಗ್ರಾಮದಲ್ಲಿ ಪದೇ ಪದೇ ಸಂಭವಿಸುತ್ತಿರುವ ಭಾರಿ ಶಬ್ದ ಹಾಗೂ ಭೂಕಂಪನದ ಅನುಭವಗಳನ್ನು ಗ್ರಾಮಸ್ಥರು ಸಚಿವರೊಂದಿಗೆ‌ ಹಂಚಿಕೊಂಡರು.

ADVERTISEMENT

ಸಂಸದ ಡಾ.ಉಮೇಶ ಜಾಧವ, ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ, ಎಂ.ಎಲ್.ಸಿ. ಬಿ.ಜಿ.ಪಾಟೀಲ, ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ, ಜಿಲ್ಲಾ ಪಂಚಾಯಿತಿ ಸಿ.ಇ.ಒ ಡಾ.ದಿಲೀಷ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.