ADVERTISEMENT

ಶಿಕ್ಷಣ ಸಚಿವ ನಾಗೇಶ್ ನಾಳೆ ನಗರಕ್ಕೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2022, 2:49 IST
Last Updated 3 ಜುಲೈ 2022, 2:49 IST
ಬಿ.ಸಿ.ನಾಗೇಶ್
ಬಿ.ಸಿ.ನಾಗೇಶ್   

ಕಲಬುರಗಿ: ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಬೆಂಗಳೂರಿನಿದ ವಿಮಾನದ ಮೂಲಕ ಸೋಮವಾರ(ಜು.4) ಬೆಳಿಗ್ಗೆ 9.45 ಗಂಟೆಗೆ ಕಲಬುರಗಿಗೆ ಆಗಮಿಸುವರು.

ಕಲಬುರಗಿಯಿಂದ ರಸ್ತೆ ಮೂಲಕ ಗಾಣಗಾಪೂರಕ್ಕೆ ತೆರಳುವರು. ಮಧ್ಯಾಹ್ನ 12.30ಕ್ಕೆ ಅಫಜಲಪುರ ತಾಲ್ಲೂಕಿನ ದೇವಲ ಗಾಣಗಾಪುರದ ಸರ್ಕಾರಿ ಪ್ರೌಢಶಾಲೆಯಲ್ಲಿ ಲರ್ನಿಂಗ್ ಲಿಂಕ್ಸ್ ಫೌಂಡೇಷನ್‌ನ ರೋಡ್ ಟು ಸ್ಕೂಲ್ ಕಾರ್ಯಕ್ರಮದಡಿ ಡಿಜಿಟಲ್ ಲಿಟರೆಸಿ ಆಂಡ್ ಲೈಫ್ ಸ್ಕೀಲ್ ಹಬ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ನಂತರ ಮಧ್ಯಾಹ್ನ 2ಕ್ಕೆ ಗಾಣಗಾಪುರದಿಂದ ರಸ್ತೆ ಮೂಲಕ ಮಂತ್ರಾಲಯಕ್ಕೆ ಪ್ರಯಾಣಿಸುವರು ಎಂದು ಪ್ರಕಟಣೆ ತಿಳಿಸಿದೆ.

ಜುಲೈ 5ರ ಸಂಜೆ 7.30ಕ್ಕೆ ರಾಯಚೂರದಿಂದ ರಸ್ತೆ ಮೂಲಕ ಕಲಬುರಗಿಗೆ ಆಗಮಿಸಿ ವಾಸ್ತವ್ಯ ಮಾಡುವರು. ಜು.6ರ ಬೆಳಿಗ್ಗೆ 9.30ಕ್ಕೆ ಕಲಬುರಗಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕಲಬುರಗಿ, ಯಾದಗಿರಿ ಹಾಗೂ ಬೀದರ್ ಜಿಲ್ಲೆಗಳ ಶೈಕ್ಷಣಿಕ ಪ್ರಗತಿ ಪರಿಶೀಲನೆ ನಡೆಸುವರು. ನಂತರ ಮಧ್ಯಾಹ್ನ 2.30ಕ್ಕೆ ಕಲಬುರಗಿಯಿಂದ ವಿಮಾನದ ಮೂಲಕ ಬೆಂಗಳೂರಿಗೆ ಪ್ರಯಾಣಿಸುವರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.