ADVERTISEMENT

ಶವ ಮನೆಯಲ್ಲಿಟ್ಟು ಇಡೀ ಕುಟುಂಬ ಮತದಾನ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2019, 19:11 IST
Last Updated 23 ಏಪ್ರಿಲ್ 2019, 19:11 IST

ಚಿತ್ತಾಪುರ (ಕಲಬುರ್ಗಿ ಜಿಲ್ಲೆ): ಪುರಸಭೆ ಸದಸ್ಯ ಮಲ್ಲಿಕಾರ್ಜುನ ಕಾಳಗಿ ಅವರ ತಾಯಿ ಮಲ್ಲಮ್ಮ ಕಾಳಗಿ (95) ಮಂಗಳವಾರ ಬೆಳಿಗ್ಗೆ ನಿಧನರಾಗಿದ್ದು, ಇಡೀ ಕುಟುಂಬ ಶೋಕದಲ್ಲಿ ಮುಳುಗಿತ್ತು.

ಶವವನ್ನು ಮನೆಯಲ್ಲೇ ಇಟ್ಟು ಕುಟುಂಬದ ಸದಸ್ಯರೆಲ್ಲರೂ ಬಾಹರಪೇಠ ಮತಗಟ್ಟೆ ಸಂಖ್ಯೆ 83ಕ್ಕೆ ತೆರಳಿ ತಮ್ಮ ಹಕ್ಕು ಚಲಾಯಿಸಿದರು.

ಮತ ಚಲಾವಣೆ ಫೋಟೊ ಫೇಸ್‌ಬುಕ್‌ಗೆ:ಕಲಬುರ್ಗಿಯ ಸುನಿಲ್‌ಕುಮಾರ ಹಾಗೂ ಯಾದಗರಿ ತಾಲ್ಲೂಕು ಬದ್ದೇಪಲ್ಲಿಯ ರಮೇಶ ಪವಾರ ಎಂಬುವರು ಬಿಜೆಪಿ ಪರ ಮತಚಲಾಯಿಸಿ, ವಿವಿ ಪ್ಯಾಟ್‌ನ ಫೋಟೊ ತೆಗೆದು ಫೇಸ್‌ಬುಕ್‌ನಲ್ಲಿ ಹಾಕಿದ್ದಾರೆ. ಈ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.