ADVERTISEMENT

ವಿದ್ಯುತ್ ತಂತಿ ತಗುಲಿಮೂವರ ದುರ್ಮರಣ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2023, 19:19 IST
Last Updated 19 ಮಾರ್ಚ್ 2023, 19:19 IST

ಚಿಂಚೋಳಿ (ಕಲಬುರಗಿ ಜಿಲ್ಲೆ): ಪಟ್ಟಣದ ಧನಗರ ಗಲ್ಲಿಯಲ್ಲಿ ವಿದ್ಯುತ್ ತಂತಿ ತಗುಲಿ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ. ಝರಣಮ್ಮ ಅಂಬಣ್ಣ ಬಸಗೊಂಡ (45), ಮಹೇಶ ಅಂಬಣ್ಣ ಬಸಗೊಂಡ (20), ಸುರೇಶ ಅಂಬಣ್ಣ ಬಸಗೊಂಡ (18) ಮೃತರು.

ಭಾನುವಾರ ಬೆಳಗಿನ ಜಾವ 1ರ ಸುಮಾರಿಗೆ ಗುಡುಗು ಮಿಂಚು ಸಹಿತ ಜೋರು ಮಳೆ ಸುರಿಯುತ್ತಿದ್ದಾಗ ವಿದ್ಯುತ್ ತಂತಿ ಕಡಿದು ನೆಲಕ್ಕೆ ಬಿದ್ದಿದೆ. ಮನೆಯ ಹೊರಗಡೆ ಸಂಗ್ರಹಿಸಿದ್ದ ಹೊಟ್ಟು (ಜಾನುವಾರುಗಳ ಮೇವು) ಮಳೆಯಲ್ಲಿ ನೆನೆಯುತ್ತದೆ ಎಂದು ತಾಡಪತ್ರಿಯಿಂದ ಮುಚ್ಚಲು ಹೋದಾಗ ವಿದ್ಯುತ್ ತಂತಿ ತಗುಲಿದೆ. ಘಟನೆಯಲ್ಲಿ ಅಂಬಣ್ಣನಿಗೆ ಗಾಯಗಳಾಗಿವೆ. ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT