ADVERTISEMENT

ಮಹಿಳಾ ಎಂಜಿನಿಯರ್‌ ನಾಪತ್ತೆ ‍ಪ್ರಕರಣ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2021, 7:54 IST
Last Updated 20 ಫೆಬ್ರುವರಿ 2021, 7:54 IST

ಕಲಬುರ್ಗಿ: ಕೆಆರ್‌ಐಡಿಎಲ್‌ನಲ್ಲಿ ಸಹಾಯಕ ಎಂಜಿನಿಯರ್ ಆಗಿರುವ ಅಕ್ಷತಾ (27) ಎಂಬುವವರು ಒಂದು ವಾರದ ಹಿಂದೆ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ.

‘ಫೆ. 12ರಂದು ಖೂಬಾ ಪ್ಲಾಟ್‌ನಲ್ಲಿರುವ ಮನೆಯಿಂದ ಕಚೇರಿ ಕೆಲಸಕ್ಕೆ ಹೋಗುತ್ತೇನೆ ಎಂದು ಹೋದ ಅವರು ಮರಳಿ ಮನೆಗೆ ಬಂದಿಲ್ಲ. ಅತ್ತ ಕೆಲಸಕ್ಕೂ ಹಾಜರಾಗಿಲ್ಲ. ಅವರ ಮೊಬೈಲ್ ಸಂಪರ್ಕ ಕೂಡ ಸಿಗುತ್ತಿಲ್ಲ ಎಂದು ಅವರ ತಂದೆ ಬಸವರಾಜ ಮಹಿಳಾ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT