ADVERTISEMENT

ಕಲಬುರ್ಗಿ | ಐಎಂಎ ‍ಪ್ರಶಸ್ತಿ: ಡಾ.ಗುಬ್ಬಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 30 ಜೂನ್ 2020, 15:47 IST
Last Updated 30 ಜೂನ್ 2020, 15:47 IST
‘ಐಎಂಎ’ ಪ್ರಶಸ್ತಿಗೆ ಭಾಜನರಾದ ವೈದ್ಯ ಸಾಹಿತಿ ಡಾ.ಎಸ್.ಎಸ್.ಗುಬ್ಬಿ ಅವರನ್ನು ಕಲಬುರ್ಗಿಯಲ್ಲಿ ಮಂಗಳವಾರ ಸನ್ಮಾನಿಸಲಾಯಿತು
‘ಐಎಂಎ’ ಪ್ರಶಸ್ತಿಗೆ ಭಾಜನರಾದ ವೈದ್ಯ ಸಾಹಿತಿ ಡಾ.ಎಸ್.ಎಸ್.ಗುಬ್ಬಿ ಅವರನ್ನು ಕಲಬುರ್ಗಿಯಲ್ಲಿ ಮಂಗಳವಾರ ಸನ್ಮಾನಿಸಲಾಯಿತು   

ಕಲಬುರ್ಗಿ: ಭಾರತೀಯ ವೈದ್ಯರ ಸಂಘದ ರಾಜ್ಯ ಶಾಖೆ ಕೊಡಮಾಡುವ 2020ನೇ ಸಾಲಿನ ‘ಐಎಂಎ’ ಪ್ರಶಸ್ತಿಗೆ ಆಯ್ಕೆಯಾದ ಜಿಲ್ಲಾ ಕನ್ನಡ ವೈದ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎಸ್.ಎಸ್.ಗುಬ್ಬಿ ಅವರನ್ನು ನಗರದಲ್ಲಿ ಸೋಮವಾರ ಕ್ರಿಯಾಶೀಲ ಗೆಳೆಯರ ಬಳಗದ ವತಿಯಿಂದ‌ ಸನ್ಮಾನಿಸಲಾಯಿತು.

ಸತ್ಕಾರ ಸ್ವೀಕರಿಸಿ ಮಾತನಾಡಿದ ಡಾ.ಎಸ್.ಎಸ್.ಗುಬ್ಬಿ, ‘ವೈದ್ಯಕೀಯ ವೃತ್ತಿ ಅತ್ಯಂತ ಪವಿತ್ರವಾದದ್ದು. ಜೀವನದಲ್ಲಿ ಪ್ರತಿಯೊಬ್ಬರಿಗೂ ಮೌಲ್ಯಗಳು ಇರಬೇಕು. ಅದರಲ್ಲೂ ಜೀವ ಉಳಿಸುವ ಜವಾಬ್ದಾರಿ ಹೊತ್ತ ವೈದ್ಯರಿಗೆ ಬಹಳ ಮುಖ್ಯ. ಸ್ವಾರ್ಥ ಬಿಟ್ಟರೆ ಸಾಧನೆಯ ಹಾದಿ ತೆರೆದುಕೊಳ್ಳುತ್ತದೆ’ ಎಂದರು.

ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ತೇಗಲತಿಪ್ಪಿ, ಪಿಡಿಎ ಎಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಬಾಬುರಾವ ಶೇರಿಕಾರ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಭವಾನಿಸಿಂಗ್ ಠಾಕೂರ್, ಪ್ರಮುಖರಾದ ಶಿವಶರಣ ಕುಸನೂರ, ಶಿವರಾಜ ಅಂಡಗಿ, ಹಣಮಂತರಾಯ ಅಟ್ಟೂರ, ರವಿಕುಮಾರ ಶಹಾಪುರಕರ್, ಶಿವಾನಂದ ಮಠಪತಿ, ಶ್ರೀಕಾಂತ ಪಾಟೀಲ ತಿಳಗೂಳ, ಸಿದ್ಧರಾಮ ಹಂಚನಾಳ, ಜಗದೀಶ ಪಾಟೀಲ, ಡಾ.ರಾಜಶೇಖರ ಪಾಟೀಲ ಹೆಬಳಿ, ಬಸವರಾಜ ಜೋಗೂರ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.