ADVERTISEMENT

‘ಕರ್ತವ್ಯದಲ್ಲಿ ಬದ್ಧತೆ ಮುಖ್ಯ’

​ಪ್ರಜಾವಾಣಿ ವಾರ್ತೆ
Published 7 ಜುಲೈ 2020, 15:05 IST
Last Updated 7 ಜುಲೈ 2020, 15:05 IST
ಸೇವಾ ನಿವೃತ್ತಿ ಹೊಂದಿದ ಕಲಬುರ್ಗಿಯ ಜಿಲಾನಾಬಾದ್‌ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಲಕ್ಷ್ಮೀಕಾಂತ ಖಣದಾಳಕರ್ ಹಾಗೂ ಪತ್ನಿಯನ್ನು ಮಂಗಳವಾರ ಸನ್ಮಾನಿಸಲಾಯಿತು
ಸೇವಾ ನಿವೃತ್ತಿ ಹೊಂದಿದ ಕಲಬುರ್ಗಿಯ ಜಿಲಾನಾಬಾದ್‌ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಲಕ್ಷ್ಮೀಕಾಂತ ಖಣದಾಳಕರ್ ಹಾಗೂ ಪತ್ನಿಯನ್ನು ಮಂಗಳವಾರ ಸನ್ಮಾನಿಸಲಾಯಿತು   

ಕಲಬುರ್ಗಿ: ‘ಸರ್ಕಾರಿ ನೌಕರಿ ಪಡೆಯುವುದಷ್ಟೇ ದೊಡ್ಡ ಸಾಧನೆಯಲ್ಲ. ಸಿಕ್ಕ ಹುದ್ದೆಗೆ ನ್ಯಾಯ ಸಲ್ಲಿಸಬೇಕು. ಪ್ರಾಮಾಣಿಕತೆ, ನಿಷ್ಠೆಯಿಂದ ಕಾರ್ಯನಿರ್ವಹಿಸಬೇಕು’ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಿವಶರಣಪ್ಪ ಮೂಳೆಗಾಂವ ಹೇಳಿದರು.

ನಗರದ ಜಿಲಾನಾಬಾದ್‌ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಲಕ್ಷ್ಮಿಕಾಂತ ಖಣದಾಳಕರ್ ಅವರು ನಿವೃತ್ತರಾದ ಹಿನ್ನೆಲೆಯಲ್ಲಿ ಮಂಗಳವಾರ ಕಾಲೇಜಿನಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ದಂಪತಿಯನ್ನು ಸತ್ಕರಿಸಿ ಅವರು ಮಾತನಾಡಿದರು.

ಜಿಲ್ಲಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಅರುಣಕುಮಾರ ಪಾಟೀಲ ಮಾತನಾಡಿ, ‘ಖಣದಾಳಕರ್ ಅವರು ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ಅಜಾತ ಶತ್ರು ಎಂದೇ ಗುರುತಿಸಿಕೊಂಡವರು. ವೈಯಕ್ತಿಕ ಜೀವನ ಬದಿಗಿರಿಸಿ, ಇಲಾಖೆಗೆ ಸಲ್ಲಿಸಿದ ಸೇವೆ ಮರೆಯುವಂತಿಲ್ಲ’ ಎಂದರು.

ADVERTISEMENT

ಲಕ್ಷ್ಮೀಕಾಂತ ಖಣದಾಳಕರ್ ಮಾತನಾಡಿ, ‘ಕಾಯಕವೇ ಕೈಲಾಸ ಎಂಬ ಮೂಲಮಂತ್ರ ನೆನಪಿಟ್ಟುಕೊಂಡರೆ ಎಲ್ಲ ಕೆಲಸಗಳೂ ಸರಾಗವಾಗಿ ನೆರವೇರುತ್ತವೆ’ ಎಂದರು.

ಕಾಲೇಜಿನ ಪ್ರಭಾರ ಪ್ರಾಂಶುಪಾಲ ಮಹಾದೇವ ನಲಕಂಠೆ, ಸುಜಾತಾ ಖಣದಾಳಕರ್, ಅನಂತರವಾವ ಕುಲಕರ್ಣಿ, ಚಂದ್ರಕಾಂತ ಅವಟೆ, ಶಿವಾಜಿ ಪಾಟೀಲ, ದೇವಣ್ಣಗೌಡ ಪಾಟೀಲ, ಆಶಾ ನಸೀಂ, ಮಧುಕರ ಮಾಶಾಳಕರ್, ಬಲರಾಮ ಚವ್ಹಾಣ, ರಮೇಶ ಮಾಡ್ಯಾಳಕರ್, ರೇವಣಸಿದ್ಧಪ್ಪ ದುಕಾನ್, ಎಚ್.ಬಿ.ಪಾಟೀಲ, ಸಿದ್ಧಲಿಂಗ ಪೂಜಾರಿ, ರಾಜಕುಮಾರ ಕೋರಿ, ರವೀಂದ್ರರೆಡ್ಡಿ ಶಿಕಾರಿ, ಧರ್ಮರಾಜ ಜವಳಿ, ಶಾಂತಗೌಡ ಪಾಟೀಲ, ಮಹೇಶ ದೇಶಪಾಂಡೆ, ಸೋಮಶೇಖರ ಚವ್ಹಾಣ, ರಾಜಶೇಖರ ಮಿಣಜಗಿ, ನೀಲಮ್ಮ ಪಾಟೀಲ, ಜಮುನಾಬಾಯಿ ಟಿಳೆ, ಡಾ.ವಿಶ್ವನಾಥ ಹೊಸಮನಿ, ರೇಷ್ಮಾ ಖಾತೂನ್, ದೇವೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.