ಜೇವರ್ಗಿ : ಮಳೆಯಿಂದ ಹಾಳಾದ ಬೆಳೆಗಳಿಗೆ ಪ್ರತಿ ಎಕರೆಗೆ ₹25 ಸಾವಿರ ಪರಿಹಾರ ನೀಡುವಂತೆ ಒತ್ತಾಯಿಸಿ ತಾಲ್ಲೂಕಿನ ಹರವಾಳ ಗ್ರಾಮ ಪಂಚಾಯಿತಿ ಕಚೇರಿ ಎದುರು ಕರ್ನಾಟಕ ಪ್ರಾಂತ ರೈತ ಸಂಘ ತಾಲ್ಲೂಕು ಘಟಕದ ವತಿಯಿಂದ ಧರಣಿ ಸತ್ಯಾಗ್ರಹ ನಡೆಸಲಾಯಿತು.
ಆಗಸ್ಟ್ ತಿಂಗಳಲ್ಲಿ ಭಾರಿ ಮಳೆ ಬಂದು ಮುಂಗಾರು ಬೆಳೆಗಳಾದ ತೊಗರಿ, ಹತ್ತಿ, ಹೆಸರು ಹಾಗೂ ತೋಟಗಾರಿಕೆ ಬೆಳೆಗಳಾದ ಬಾಳೆ, ಕಬ್ಬು, ಪಪ್ಪಾಯ ಸೇರಿದಂತೆ ಇನ್ನಿತರ ಎಲ್ಲ ಬೆಳೆ ಹಾಳಾಗಿ ಹೋಗಿವೆ. ತಾಲ್ಲೂಕಿನ ರೈತಾಪಿ ವರ್ಗ ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಒಣ ಬೇಸಾಯದ ಬೆಳೆಗಳಾದ ಹತ್ತಿ, ತೊಗರಿಗೆ ಪ್ರತಿ ಎಕರೆಗೆ ₹25 ಸಾವಿರ ಹಾಗೂ ತೋಟಗಾರಿಕೆ ಬೆಳೆಗಳಿಗೆ ₹50 ಸಾವಿರ ಪರಿಹಾರ ಕೊಡಬೇಕು. ಹರವಾಳ ಗ್ರಾಮಕ್ಕೆ ಮೂಲಭೂತ ಸೌಲಭ್ಯ ಒದಗಿಸಿಕೊಡಬೇಕು. ಅರ್ಧಕ್ಕೆ ನಿಂತಿರುವ ಹನುಮಾನ ದೇವಾಲಯ ಪೂರ್ಣಗೊಳಿಸಬೇಕು ಮತ್ತು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲಾಯಿತು.
ರೈತ ಸಂಘದ ಅಧ್ಯಕ್ಷ ಸುಭಾಷ ಹೊಸಮನಿ, ಮಲ್ಕಪ್ಪ ಮ್ಯಾಗೇರಿ, ಉಸ್ಮಾನ ಅಲಿ ಹರನೂರ, ಸಿದ್ದಣ್ಣ ಅದ್ವಾನಿ, ಶಾಂತಪ್ಪ ಸಾಹುಕಾರ ಗಣಜಲಖೇಡ, ರಮೇಶ ಬಂದರವಾಡ, ಗುರಪ್ಪ ಮುಕ್ಕ, ಶ್ರೀಮಂತ ಹಳ್ಳಿ, ಚಂದ್ರಶೇಖರ ಕಲಶೆಟ್ಟಿ, ಶರಣಬಸಪ್ಪ ಕೋಣೀನ್, ಶಾಂತಾಬಾಯಿ ತಳಕೇರಿ, ಕಾಳಮ್ಮ ಮಂಗಿ, ಪೀರಸಾಬ ಮಲಗೋಳ, ಶಿವಯೋಗಪ್ಪ ಹಾಗೂ ಇತರರು ಭಾಗವಹಿಸಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.