ಕಲಬುರಗಿ: ಕಮಲಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ₹17.95 ಲಕ್ಷವನ್ನು ದುರ್ಬಳಕೆ ಮಾಡಿಕೊಂಡ ಆರೋಪದಡಿ ಸಂಘದ ಈ ಹಿಂದಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶರಣಬಸಪ್ಪ ಕಲ್ಯಾಣಿ ವಿರುದ್ಧ ಪ್ರಕರಣ ದಾಖಲಾಗಿದೆ.
ಸಂಘದ ಅಧ್ಯಕ್ಷ ಅಮೃತಪ್ಪ ಗುರುಲಿಂಗಪ್ಪ ನೀಡಿದ ದೂರಿನ ಅನ್ವಯ, ಶರಣಬಸಪ್ಪ ವಿರುದ್ಧ ಐಪಿಸಿ ಸೆಕ್ಷನ್ 406, 408, 409 ಹಾಗೂ 420 ಅಡಿ ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
2013ರಿಂದ 2017ರ ಅವಧಿಯಲ್ಲಿ ಶರಣಬಸಪ್ಪ ಅವರು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಗಿದ್ದರು. ಸಂಘದ ಸದಸ್ಯರಿಗೆ ಪಾವತಿಸುವ ಠೇವಣಿ ಹಾಗೂ ಸದಸ್ಯರಿಂದ ಬರಬೇಕಾದ ವಿವಿಧ ಬಗೆಯ ಠೇವಣಿಯ ₹17.95 ಲಕ್ಷವನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.