ADVERTISEMENT

ಕಲಬುರಗಿ: ಫ್ಯುಜನ್‌ ನೀಟ್ ಅಕಾಡೆಮಿ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2025, 16:01 IST
Last Updated 22 ಜೂನ್ 2025, 16:01 IST
ಕಲಬುರಗಿಯಲ್ಲಿ ಭಾನುವಾರ ಫ್ಯುಜನ್‌ ನೀಟ್ ಅಕಾಡೆಮಿಯನ್ನು ಶಾಸಕ ಬಸವರಾಜ ಮತ್ತಿಮಡು ಉದ್ಘಾಟಿಸಿದರು
ಕಲಬುರಗಿಯಲ್ಲಿ ಭಾನುವಾರ ಫ್ಯುಜನ್‌ ನೀಟ್ ಅಕಾಡೆಮಿಯನ್ನು ಶಾಸಕ ಬಸವರಾಜ ಮತ್ತಿಮಡು ಉದ್ಘಾಟಿಸಿದರು   

ಕಲಬುರಗಿ: ‘ವೈದ್ಯಕೀಯ ಶಿಕ್ಷಣ ಪಡೆಯುವುದಕ್ಕೆ ನೀಟ್‌ ಪರೀಕ್ಷೆ ಬಹಳ ಮುಖ್ಯವಾಗಿದೆ’ ಎಂದು ಶಾಸಕ ಬಸವರಾಜ ಮತ್ತಿಮಡು ಹೇಳಿದರು.

ನಗರದ ಸಂಗಮೇಶ್ವರ ಕಾಲೊನಿಯಲ್ಲಿ ಭಾನುವಾರ ಫ್ಯುಜನ್‌ ನೀಟ್ ಅಕಾಡೆಮಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ವಿದ್ಯಾರ್ಥಿಗಳು ನೀಟ್‌ ಕೋಚಿಂಗ್ ಪಡೆಯಲು ಬೆಂಗಳೂರು, ಮೈಸೂರು, ಧಾರವಾಡ ಮತ್ತು ಹೈದರಾಬಾದ್‌ಗೆ ಹೋಗುತ್ತಿದ್ದರು. ಇದನ್ನು ತಪ್ಪಿಸುವುದಕ್ಕಾಗಿ ಅಕಾಡೆಮಿ ಪ್ರಾರಂಭಿಸಿದ್ದು ಸಂತೋಷದ ವಿಷಯ’ ಎಂದರು.

ADVERTISEMENT

ಶಾಸಕ ಅಲ್ಲಮಪ್ರಭು ಪಾಟೀಲ ಮುಖ್ಯ ಅತಿಥಿಯಾಗಿದ್ದರು. ವಿಜಯಕುಮಾರ ಗಡಬಳಿ, ಶೋಭಾ ಪಾಟೀಲ, ಗಾಂಧೀಜಿ ಮೋಳಕೆರೆ ಉಪಸ್ಥಿತರಿದ್ದರು.

ಅಕಾಡೆಮಿಯ ನಿರ್ದೇಶಕ ಮಹೇಶ್‌ಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಸ್ತುವಾರಿ ಪರಮೇಶ್ವರ ಸ್ವಾಮಿ ವಂದಿಸಿದರು. ವೈದ್ಯರು ಮತ್ತು ವೈದ್ಯಕೀಯ ಶಿಕ್ಷಣದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.