ಕಲಬುರಗಿ: ‘ಶಿಕ್ಷಣದ ಗುಣಮಟ್ಟ ಕುಸಿತ ತಡೆಯಲು ಮೊದಲಿಗೆ ಶಿಕ್ಷಕರನ್ನು ಬಿಸಿಯೂಟ ಹೊಣೆಯಿಂದ ಬಿಡಿಸಿ, ಅವರನ್ನು ಬೋಧನೆಗೆ ಸೀಮಿತಗೊಳಿಸಬೇಕಿದೆ’ ಎಂದು ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಅಭಿಪ್ರಾಯಪಟ್ಟರು.
ಕಸಾಪ ಜಿಲ್ಲಾ ಘಟಕ ಇಲ್ಲಿ ಏರ್ಪಡಿಸಿದ್ದ ‘ಮುಖಾಮುಖಿ’ ಸಂವಾದ ಕಾರ್ಯಕ್ರಮಯಲ್ಲಿ ಅವರು ಮಾತನಾಡಿದರು. ‘ಕಲಿಸುವಾಗ ಶಿಕ್ಷಕರು ಮಕ್ಕಳಿಗೆ ಶಿಕ್ಷೆ ಕೊಡದಿದ್ದರೆ, ಮುಂದೆ ಆ ಮಕ್ಕಳು ಪೊಲೀಸ್ ಠಾಣೆಯಲ್ಲಿ ಶಿಕ್ಷೆ ಎದುರಿಸುವ ಸಂದರ್ಭ ಬಂದರೂ ಬರಬಹುದು. ಎಲ್ಲಿ ಶಿಕ್ಷೆ ಇಲ್ಲವೋ ಅಲ್ಲಿ ಶಿಕ್ಷಕರು–ಶಿಕ್ಷಣವೂ ಇಲ್ಲ’ ಎಂದರು.
‘ಗಡಿಭಾಗದ ಪ್ರದೇಶಾಭಿವೃದ್ಧಿಗೆ ಸಿಎಸ್‌ಆರ್ ನಿಧಿ ಬಳಕೆಗೆ ಬಗೆಗೂ ಚಿಂತನೆ ನಡೆದಿದ್ದು, ಈ ನಿಟ್ಟಿನಲ್ಲಿ ಪ್ರಯತ್ನ ಸಾಗಿದೆ’ ಎಂದು ಸಭಿಕರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.