ADVERTISEMENT

21ರಂದು ಮಹಾಗಣಪತಿ ಶೋಭಾಯಾತ್ರೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2022, 15:59 IST
Last Updated 15 ಸೆಪ್ಟೆಂಬರ್ 2022, 15:59 IST
ನಾಗೇಂದ್ರ ಕಾದಾಡೆ
ನಾಗೇಂದ್ರ ಕಾದಾಡೆ   

ಕಲಬುರಗಿ: ಹಿಂದು ಜಾಗರಣ ವೇದಿಕೆಯಿಂದ ಕೋಟೆ ಬಳಿ ಪ್ರತಿಷ್ಠಾಪಿಸಲಾಗಿರುವ ಹಿಂದು ಮಹಾಗಣಪತಿಯನ್ನು ಸೆಪ್ಟೆಂಬರ್ 21ರಂದು ನಗರದಲ್ಲಿ ಬೃಹತ್ ಶೋಭಾಯಾತ್ರೆ ನಡೆಸಿ ನಂತರ ಅಪ್ಪನ ಕೆರೆಯಲ್ಲಿ ವಿಸರ್ಜಿಸಲಾಗುವುದು ಎಂದು ವೇದಿಕೆಯ ಜಿಲ್ಲಾ ಸಂಚಾಲಕ ನಾಗೇಂದ್ರ ಕಾಬಾಡೆ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈಗಾಗಲೇ ಗಣೇಶ ಮೂರ್ತಿಗೆ ಸಾವಿರ ಮಾತೆಯರಿಂದ ಮಹಾಮಂಗಳಾರತಿ, ನಗರದ ಪ್ರತಿಷ್ಠಿತ ಗಣೇಶ ಮಂಡಳಿಗಳ ಉತ್ಸವ ಸಮಿತಿ ಸದಸ್ಯರಿಗೆ ಸನ್ಮಾನ, ಶಾಲಾ, ಕಾಲೇಜುಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಡಾ.ಬಿ.ಆರ್. ಅಂಬೇಡ್ಕರ್ ಮತ್ತು ರಾಷ್ಟ್ರೀಯತೆ ಕುರಿತು ಉಪನ್ಯಾಸ ಹಮ್ಮಿಕೊಳ್ಳಲಾಗಿತ್ತು’ಎಂದರು.

ಸೆ‍‍ಪ್ಟೆಂಬರ್ 16ರಂದು ಕಲ್ಯಾಣ ಕರ್ನಾಟಕ ಉತ್ಸವ ದಿನದ ಕುರಿತು ಉಪನ್ಯಾಸ ಆಯೋಜಿಸಲಾಗಿದೆ. 17ರಂದು ಕಲ್ಯಾಣ ಕರ್ನಾಟಕ ವಿಮೋಚನಾ ದಿನದ ನಿಮಿತ್ತ ರಾಷ್ಟ್ರಧ್ವಜಾರೋಹಣ ನೆರವೇರಿಸಲಾಗುವುದು. 19ರಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರಿಂದ ವೀರ ಸಾವರ್ಕರ್ ಕುರಿತು ವಿಶೇಷ ಉಪನ್ಯಾಸ ಹಮ್ಮಿಕೊಳ್ಳಲಾಗಿದೆ’ ಎಂದರು.

ADVERTISEMENT

ಮುಖಂಡರಾದ ಶ್ರೀಮಂತ ನವಲದಿ, ಪ್ರಶಾಂತ ಗುಡ್ಡಾ, ಶ್ರೀಶೈಲ ಮೂಲಗೆ, ಸಿದ್ದರಾಜ ಬಿರಾದಾರ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.