ADVERTISEMENT

ಎಸ್‌ಬಿಆರ್‌ನಲ್ಲಿ ಗಣೇಶ ಚತುರ್ಥಿ ಸಂಭ್ರಮ: ಶರಣಬಸವಪ್ಪ ಅಪ್ಪ ಕುಟುಂಬ ಭಾಗಿ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2018, 12:33 IST
Last Updated 14 ಸೆಪ್ಟೆಂಬರ್ 2018, 12:33 IST
ಶರಣಬಸವೇಶ್ವರ ಪಬ್ಲಿಕ್ ಶಾಲೆಯಲ್ಲಿ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಗೆ ಶರಣಬಸವಪ್ಪ ಅಪ್ಪ ಪೂಜೆ ನೆರವೇರಿಸಿದರು
ಶರಣಬಸವೇಶ್ವರ ಪಬ್ಲಿಕ್ ಶಾಲೆಯಲ್ಲಿ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಗೆ ಶರಣಬಸವಪ್ಪ ಅಪ್ಪ ಪೂಜೆ ನೆರವೇರಿಸಿದರು   

ಕಲಬುರ್ಗಿ: ಗಣೇಶೋತ್ಸವ ಅಂಗವಾಗಿ ಶರಣಬಸವೇಶ್ವರ ಪಬ್ಲಿಕ್ ಶಾಲೆಯಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಶರಣಬಸವಪ್ಪ ಅಪ್ಪ ಅವರು ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಪೂಜೆ ನೆರವೇರಿಸಿದರು.

ಇದೇ ಮೊದಲ ಬಾರಿಗೆ ಶಾಲೆಗೆ ಬರುವ ಮೂಲಕ ಕುಮಾರ ದೊಡ್ಡಪ್ಪ ಅಪ್ಪ ಸಾರ್ವಜನಿಕವಾಗಿ ದರ್ಶನ ನೀಡಿದರು.

ಶರಣಬಸವಪ್ಪ ಅಪ್ಪ ಮಾತನಾಡಿ, ‘ಕುಮಾರ ದೊಡ್ಡಪ್ಪ ಅಪ್ಪ ಸಾಕ್ಷಾತ್ ದೊಡ್ಡಪ್ಪ ಅಪ್ಪನವರ ಪ್ರತಿರೂಪವೇ ಮೈವೆತ್ತಂತಿದ್ದಾನೆ’ ಎಂದು ನುಡಿದರು.

ADVERTISEMENT

ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಬಸವರಾಜ ಅವರು, ದಾಸೋಹ ಮಹಾಮನೆಯ ದಾಕ್ಷಾಯಿಣಿ ಅವ್ವ ಅವರ ದಾಸೋಹವನ್ನು ಸ್ಮರಿಸಿದರು. ಅಪ್ಪ ಅವರು ಶರಣಬಸವೇಶ್ವರ ಸಂಸ್ಥೆಯನ್ನು ಬೆಳೆಸಿದ ರೀತಿಯನ್ನು ಕೊಂಡಾಡಿದರು.

ಶರಣಬಸವ ವಿಶ್ವವಿದ್ಯಾಲಯದ ಕುಲಪತಿ ಡಾ. ನಿರಂಜನ ನಿಷ್ಠಿ, ಅವರ ಪತ್ನಿ ನಂದಿನಿ ನಿಷ್ಠಿ, ಶರಣಬಸವೇಶ್ವರ ಪಬ್ಲಿಕ್ ಶಾಲೆಯ ಪ್ರಾಚಾರ್ಯ ಎನ್.ಎಸ್. ದೇವರಕಲ್, ಅಪ್ಪ ಪಬ್ಲಿಕ್ ಶಾಲೆಯ ಪ್ರಾಚಾರ್ಯ ಶಂಕರಗೌಡ ಹೊಸಮನಿ, ವಿಜ್ಞಾನ ಶಿಕ್ಷಕ ಪ್ರಸಾದ್ ಜಿ.ಕೆ. ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.