ಆಳಂದ: ‘ಪಟ್ಟಣದಲ್ಲಿ ಹಿಂದೂ ಮಹಾ ಗಣಪತಿ ಸಮಿತಿಯಿಂದ ಪಟ್ಟಣದ ಶ್ರೀ ರಾಮ ಮಾರುಕಟ್ಟೆ ಆವರಣದಲ್ಲಿ 21 ದಿನಗಳಿಂದ ಪ್ರತಿಷ್ಠಾಪಿಸಲಾದ ಶೋಭ ಯಾತ್ರೆ ಸಿದ್ಧತೆಯೊಂದಿಗೆ ರಸ್ತೆ ಕಂಬಗಳಿಗೆ ಹಿಂದೂ ಧ್ವಜ ಕಟ್ಟುತ್ತಿರುವಾಗ ಪುರಸಭೆ ಅಧ್ಯಕ್ಷ ಪೀರ್ದೋಸ ಅನ್ಸಾರಿ ಅಡ್ಡಿ ಪಡಿಸಿದ್ದಾರೆ’ ಎಂದು ಆರೋಪಿಸಿ ಮಹಾ ಗಣಪತಿ ಕಾರ್ಯಕರ್ತರು ಮಂದಿರ ಮುಂದೆ ಪ್ರತಿಭಟನೆ ನಡೆಸಿದರು.
ಭಾನುವಾರ ಬೆಳಗ್ಗೆಯಿಂದ ಕಾರ್ಯಕರ್ತರು ಹಿಂದೂ ಭಾಂದವರ ಅಂಗಡಿ ಮುಗ್ಗಟ್ಟು ಬಂದ ಮಾಡಿಸಿ ಮಿಂಚಿನ ಪ್ರತಿಭಟನೆ ನಡೆಸಿದಾಗ ಪೊಲೀಸರು ಸ್ಥಳಕ್ಕೆ ಧಾವಿಸಿ ಸಮಸ್ಯೆಯಾಗದಂತೆ ಭದ್ರತೆ ನೀಡಿದರು.
ಕೂಡಲೇ ಪುರಸಭೆ ಅಧ್ಯಕ್ಷರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಬೇಕು ಅಲ್ಲದೇ ಗಣಪತಿ ಶೋಭ ಯಾತ್ರೆಗೆ ರಸ್ತೆ ಶೃಂಗಾರಗೊಳಿಸಲು ಹಾಗೂ ಕಂಬಗಳಿಗೆ ಹಿಂದೂ ಧ್ವಜ ಕಟ್ಟಲು ಅನುವು ಮಾಡಿಕೊಡಬೇಕೆಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.
ಬೆಳಗ್ಗೆಯಿಂದ ಮಧ್ಯಾಹ್ನ1 ಗಂಟೆಗೆ ಪ್ರತಿಭಟನೆ ಮುಂದುವರೆಸಿದ್ದರಿಂದ ಪೊಲೀಸರು ಜಾಗೃತರಾಗಿ ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಪೊಲೀಸ ಬೀಗಿ ಭದ್ರತೆ ಕಲ್ಪಿಸಿದರು.
ಪ್ರತಿಭಟನಾಕಾರರು ಸಮಸ್ಯೆ ಸ್ಪಂದಿಸುವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲಾ, ಪ್ರಮುಖ ರಸ್ತೆಗಳ ಮೂಲಕ ಮೇರವಣಿಗೆ ನಡೆಸುತ್ತೇವೆಂದು ಮುಂದಾದಾಗ ಸಿಪಿಐ ಪ್ರಕಾಶ ಯಾತನೂರ ಹಾಗೂ ಸಿಬ್ಬಂದಿಯವರು ಸ್ಥಳದಲ್ಲಿಯೇ ಇದ್ದು ಪ್ರತಿಭಟನಾಕಾರರ ಮನವೊಲಿಸಿ ರಸ್ತೆ ಕಂಬಗಳಿಗೆ ಧ್ವಜಗಳನ್ನು ಕಟ್ಟಲು ಅನುವು ಮಾಡಿಕೊಟ್ಟರು. ತದನಂತರ ದರ್ಗಾ ಬೇಸ್‌ದಿಂದ ರಜವಿ ರಸ್ತೆ ವರೆಗೆ ಧ್ವಜ ಹಾಗೂ ಪರಾರಿಗಳನ್ನು ಕಟ್ಟಿದಾಗ ಪ್ರತಿಭಟನೆ ಹಿಂಪಡೆದರು.
ಪ್ರತಿಭಟನೆಯಲ್ಲಿ ಹರ್ಷಾನಂದ ಗುತ್ತೇದಾರ, ಮಹೇಶ ಗೌಳಿ, ಗುಂಡು ಗೌಳಿ, ಈರಣ್ಣಾ ಹತ್ತರಕಿ, ಮಲ್ಲಿಕಾರ್ಜುನ ಕಂದಗೂಳೆ, ಸಂಜಯ ನಾಯಕ, ಗಣೇಶ ಭೋಸಲೆ, ರಾಜು ಚವ್ಹಾಣ, ಸಂತೋಷ ಪವಾರ, ಸೋಮು ಹತ್ತರಕಿ, ರವಿ ಪಟ್ಟಣ ಶಟ್ಟಿ, ಸಂಜಯ ಉಮರ್ಗೆ , ಬಸವರಾಜ ಹತ್ತರಕಿ, ನಟರಾಜ ಸರಸಂಬಿ ಸೇರಿದಂತೆ ನೂರಾರು ಹಿಂದೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಇದ್ದರು.
ಸಿಪಿಐ ಪ್ರಕಾಶ ಯಾತನೂರ ನೇತೃತ್ವದಲ್ಲಿ ಪಿಎಸ್‌ಐ ಇಂದುಮತಿ ಪಾಟೀಲ್, ಸಂಜಯ ರೆಡ್ಡಿ, ಸವಿತಾ ಕಲ್ಲೂರ, ಸಿದ್ಧರಾಮ ನರೋಣಾ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ ಬಂದೋಬಸ್ತ ಕಲ್ಪಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.