ADVERTISEMENT

ಆಳಂದ: ಗಾಂಜಾ ಸಾಗಾಟ: ತಂದೆ ಬಂಧನ, ಮಗ ಪರಾರಿ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2021, 14:07 IST
Last Updated 4 ಡಿಸೆಂಬರ್ 2021, 14:07 IST
ಆಳಂದ ತಾಲ್ಲೂಕಿನ ನಿಂಬರ್ಗಾ ಪೊಲೀಸರು ಗಾಂಜಾ ಸಾಗಾಟ ಮಾಡುತ್ತಿದ್ದ ಆರೋ‍ಪಿಯನ್ನು ಬಂಧಿಸಿರುವುದು. ಡಿವೈಎಸ್‌ಪಿ ಮಲ್ಲಿಕಾರ್ಜುನ ಸಾಲಿ, ಪಿಎಸ್‌ಐ ಸುವರ್ಣಾ ಮಲಶೆಟ್ಟಿ ಹಾಗೂ ಸಿಬ್ಬಂದಿ ಇದ್ದರು
ಆಳಂದ ತಾಲ್ಲೂಕಿನ ನಿಂಬರ್ಗಾ ಪೊಲೀಸರು ಗಾಂಜಾ ಸಾಗಾಟ ಮಾಡುತ್ತಿದ್ದ ಆರೋ‍ಪಿಯನ್ನು ಬಂಧಿಸಿರುವುದು. ಡಿವೈಎಸ್‌ಪಿ ಮಲ್ಲಿಕಾರ್ಜುನ ಸಾಲಿ, ಪಿಎಸ್‌ಐ ಸುವರ್ಣಾ ಮಲಶೆಟ್ಟಿ ಹಾಗೂ ಸಿಬ್ಬಂದಿ ಇದ್ದರು   

ಆಳಂದ: ತಾಲ್ಲೂಕಿನ ನಿಂಬರ್ಗಾ–ಗಾಣಗಾಪುರ ಮಾರ್ಗದಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಶನಿವಾರ ಬಂಧಿಸಲಾಗಿದೆ.

ಆರೋಪಿಗಳಾದ ದೌಲಪ್ಪ ಶಂಕರ ಕುಂಬಾರ ಹಾಗೂ ಆತನ ಮಗ ಶಿವಲಿಂಗಪ್ಪ ಇಬ್ಬರೂ ದ್ವಿಚಕ್ರ ವಾಹನದ ಮೇಲೆ ಗೋಣಿಚೀಲದಲ್ಲಿ ಗಾಂಜಾ ಸಾಗಾಟ ಮಾಡಿ ಗಡಿ ಗ್ರಾಮಗಳಲ್ಲಿ ಮಾರಾಟ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ನಿಂಬರ್ಗಾ ಪಿಎಸ್‌ಐ ಸುವರ್ಣಾ ಮಲಶೆಟ್ಟಿ, ಅಪರಾಧ ವಿಭಾಗದ ಪಿಎಸ್‌ಐ ಬಸವರಾಜ ಅವರು ಡಿವೈಎಸ್‌ಪಿ ಮಲ್ಲಿಕಾರ್ಜುನ ಮಾರ್ಗದರ್ಶನದಲ್ಲಿ ಸಿಬ್ಬಂದಿ ದಾಳಿ ಮಾಡಿ ಆರೋಪಿಗಳನ್ನು ಗಾಂಜಾ ಸಮೇತ ವಶಕ್ಕೆ ಪಡೆದಿದ್ದಾರೆ.

ಪೊಲೀಸರನ್ನು ಕಂಡು ಬೈಕ್‌ ಹಿಂಬದಿ ಕುಳಿತಿದ್ದ ಶಿವಲಿಂಗಪ್ಪ ಪರಾರಿಯಾಗಿದ್ದಾನೆ. ಬಂಧಿತರು ನೆರೆಯ ಅಕ್ಕಲಕೋಟದ ಮಗಳಿ ಗ್ರಾಮದ ನಿವಾಸಿಗಳು. ದೌಲಪ್ಪ ಬಳಿಯ ಚೀಲದಲ್ಲಿ ₹ 2.62 ಲಕ್ಷ ಮೌಲ್ಯದ ಗಾಂಜಾವನ್ನು ಜಪ್ತಿ ಮಾಡಲಾಗಿದೆ. ತಂದೆ, ಮಗನ ಮೇಲೆ ನಿಂಬರ್ಗಾ ಪೊಲೀಸ್‌ ಠಾಣೆ ಪ್ರಕರಣ ದಾಖಲಾಗಿದೆ.

ADVERTISEMENT

ಹಾವು ಕಡಿದು ಮಹಿಳೆ ಸಾವು

ಆಳಂದ: ತಾಲ್ಲೂಕಿನ ಮಟಕಿ ಗ್ರಾಮದಲ್ಲಿ ಶುಕ್ರವಾರ ಹಾವು ಕಡಿದು ಮಮತಾ ರಾಜಶೇಖರ ಎಮ್ಮೆ (21) ಎಂಬುವವರು ಮೃತಪಟ್ಟಿದ್ದಾರೆ.

ಹೊಲದಲ್ಲಿ ಕೆಲಸ ಮಾಡುವಾಗ ಹಾವು ಕಚ್ಚಿದೆ. ತಕ್ಷಣ ಆಳಂದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸಲಿಲ್ಲ. ಆಳಂದ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.