
ಚಿತ್ತಾಪುರ: ಪಟ್ಟಣದ ಬಹಾರ್ ಪೇಠದಲ್ಲಿ ಬುಧವಾರ ಮಧ್ಯಾಹ್ನ ಪತ್ರಾಸ್ ಮನೆಯೊಂದರಲ್ಲಿ ಸಿಲಿಂಡರ್ ಸ್ಫೋಟಿಸಿದ್ದರಿಂದ ಮನೆಯಲ್ಲಿದ್ದ ದವಸ ಧಾನ್ಯ, ಸಾಮಗ್ರಿಗಳು ಸುಟ್ಟು ಹೋಗಿವೆ.
ಜಗಮ್ಮ ಮೋನಪ್ಪ ಸಿಂದಗಿ ಎಂಬುವವರ ಮನೆಯಲ್ಲಿ ಈ ಅಗ್ನಿ ದುರಂತ ಜರುಗಿದೆ.
ಮನೆಯಲ್ಲಿ ಅವರೊಬ್ಬರೇ ವಾಸವಾಗಿದ್ದರು. ಬುಧವಾರ ಬೆಳಿಗ್ಗೆ ಕೂಲಿ ಕೆಲಸಕ್ಕೆ ಹೋಗುವ ಮುಂಚೆ ಜಗಮ್ಮ ದೇವರ ಜಗುಲಿ ಮುಂದೆ ದೀಪ ಹಚ್ಚಿಟ್ಟು ಹೋಗಿದ್ದರು. ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿ ಅಗ್ನಿ ದುರಂತ ನಡೆದಿದೆ ಎನ್ನಲಾಗಿದೆ.
ಮನೆಗೆ ಬೆಂಕಿ ತಗುಲಿದಾಗ ಆರಿಸಲು ಓಡಿ ಬಂದ ಬಡಾವಣೆಯ ವ್ಯಕ್ತಿಗೆ ಬೆಂಕಿ ತಗುಲಿ ಸಣ್ಣಪುಟ್ಟ ಗಾಯಗಳಾಗಿವೆ.
₹ 50 ಸಾವಿರನಗದು ಸೇರಿದಂತೆ ದವಸ ಧಾನ್ಯ, ಬಟ್ಟೆ ಒಟ್ಟು ₹ 1.50 ಲಕ್ಷದ ಮೌಲ್ಯದ ಸಾಮಗ್ರಿಗಳು ಸುಟ್ಟುಹೋಗಿವೆ ಎಂದು ಜಗಮ್ಮ ತಿಳಿಸಿದ್ದಾರೆ. ಪಿಎಸ್ಐ ಮಂಜುನಾಥರೆಡ್ಡಿ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.