ADVERTISEMENT

ಘತ್ತರಗಿ: ಭೀಮೆಯ ಪಾಲಾದ ಯುವಕ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2024, 16:06 IST
Last Updated 16 ಆಗಸ್ಟ್ 2024, 16:06 IST

ಅಫಜಲಪುರ (ಕಲಬುರಗಿ ಜಿಲ್ಲೆ): ಘತ್ತರಗಾದ ಭೀಮಾ ನದಿಯಲ್ಲಿ ಶುಕ್ರವಾರ ಶ್ರಾವಣ ಮಾಸದ ನಿಮಿತ್ತ ಸ್ನಾನಕ್ಕೆ ನದಿಗಿಳಿದ ಯುವಕ ಸಚಿನ್‌ ರಾಜಾರಾಮ ಕಾಂಬಳೆ (23) ನೀರು ಪಾಲಾಗಿದ್ದಾನೆ.

ಯಾದಗಿರಿ ಜಿಲ್ಲೆಯ ಯಂಕಂಚಿ ಗ್ರಾಮದ ಯುವಕ ಭಾಗ್ಯವಂತಿಯ ದರ್ಶನಕ್ಕಾಗಿ ಬಂದಿದ್ದ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಯುವಕನ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ್ದಾರೆ. ಶನಿವಾರ ಬೆಳಿಗ್ಗೆ ಮತ್ತೆ ಕಾರ್ಯಾಚರಣೆ ಪ್ರಾರಂಭವಾಗಲಿದೆ. ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಯಾಚರಣೆಯಲ್ಲಿ ಎಎಸ್ಐ ಅಶೋಕ ಜಮಾದಾರ, ಮುಬಾರಕ ಇಂಡಿಕರ್, ರಮೇಶ ಬಿರಾದಾರ, ಮಂಜುನಾಥ ನಿಂಬರಗಿ, ಸಿದ್ದಲಿಂಗ, ಜಗದೇವಪ್ಪ, ಹೊನ್ನಲಿಂಗ ಭಾಗಿಯಾಗಿದ್ದರು

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.