ADVERTISEMENT

ಧರ್ಮವಾಡಿ: ಅಧಿಕಾರಿಗಳ ಗ್ರಾಮವಾಸ್ತವ್ಯ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2022, 5:27 IST
Last Updated 20 ಮಾರ್ಚ್ 2022, 5:27 IST
ಆಳಂದ ತಾಲ್ಲೂಕಿನ ಧರ್ಮವಾಡಿ ಗ್ರಾಮದಲ್ಲಿ ಏರ್ಪಡಿಸಿದ ಅಧಿಕಾರಿಗಳ ಗ್ರಾಮ ವಾಸ್ತವ್ಯದಲ್ಲಿ ಅರ್ಹ ಫಲಾನುಭವಿಗಳಿಗೆ ಉಪ ತಹಶೀಲ್ದಾರ್ ಬಸವರಾಜ ರಕ್ಕಸಗಿ ಆದೇಶಪ್ರತಿ ವಿತರಿಸಿದರು
ಆಳಂದ ತಾಲ್ಲೂಕಿನ ಧರ್ಮವಾಡಿ ಗ್ರಾಮದಲ್ಲಿ ಏರ್ಪಡಿಸಿದ ಅಧಿಕಾರಿಗಳ ಗ್ರಾಮ ವಾಸ್ತವ್ಯದಲ್ಲಿ ಅರ್ಹ ಫಲಾನುಭವಿಗಳಿಗೆ ಉಪ ತಹಶೀಲ್ದಾರ್ ಬಸವರಾಜ ರಕ್ಕಸಗಿ ಆದೇಶಪ್ರತಿ ವಿತರಿಸಿದರು   

ಆಳಂದ: ತಾಲ್ಲೂಕಿನ ಧರ್ಮವಾಡಿ ಗ್ರಾಮದಲ್ಲಿ ಶನಿವಾರ ಜಿಲ್ಲಾಧಿಕಾರಿಗಳ ನಡೆ-ಹಳ್ಳಿ ಕಡೆ ಕಾರ್ಯಕ್ರಮದಡಿ ತಾಲ್ಲೂಕು ಮಟ್ಟದ ಅಧಿಕಾರಿಗಳ ಗ್ರಾಮ ವಾಸ್ತವ್ಯ ಜರುಗಿತು.

ಬೆಳಗ್ಗೆ ಉಪ ತಹಶೀಲ್ದಾರ್ ಬಸವರಾಜ ರಕ್ಕಸಗಿ ಅವರು ಗ್ರಾಮ ವಾಸ್ತವ್ಯ ಕಾರ್ಯಕ್ರಮ ಉದ್ಘಾಟಿಸಿದರು.

ಅಧಿಕಾರಿಗಳು ಸ್ಥಳದಲ್ಲಿ ಪರಿಶೀಲಿಸಿ 15 ಜನರಿಗೆ ವಿವಿಧ ಪಿಂಚಣಿ ಸೌಲಭ್ಯದ ಮಾಸಾಶನದ ಆದೇಶಪ್ರತಿ ಮಂಜೂರು ಮಾಡಿ ವಿತರಿಸಿದರು. 20 ರೈತರ ಪಹಣಿ ತಿದ್ದುಪಡಿ ದೋಷಗಳನ್ನು ಸರಿಪಡಿಸಲಾಯಿತು.

ADVERTISEMENT

ಗ್ರಾಮ ಪಂಚಾಯಿತಿ ಸದಸ್ಯರ, ಮುಖಂಡರ ನೇತೃತ್ವದಲ್ಲಿಸಮಸ್ಯೆಗಳ ಪರಿಹಾರಕ್ಕೆ ಮನವಿ ಸಲ್ಲಿಸಲಾಯಿತು.

ಉಪ ತಹಶೀಲ್ದಾರ್ ಮಹೇಶ ದ್ಮಾಮನಗಿಡ, ಎಡಿಎಲ್ ಆರ್ ಜಿಡಗಿಕರ್, ಕಂದಾಯ ನಿರೀಕ್ಷಕ ಅನೀಲಕುಮಾರ, ಗ್ರಾಮ ಲೆಕ್ಕಪಾಲಕ ಸಿದ್ದರಾಮಯ್ಯ ಸ್ವಾಮಿ, ಪ್ರಭುಲಿಂಗ ತಟ್ಟೆ, ಶಶಿಕಾಂತ ಗೌಡ, ಜೆ.ಕೆ.ಅನ್ಸಾರಿ, ಗಣಪತಿ ಪ್ರಚಂಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.