ADVERTISEMENT

ಗುಲಬರ್ಗಾ ವಿಶ್ವವಿದ್ಯಾಲಯ ಘಟಿಕೋತ್ಸವ; ಜಯಶ್ರೀಗೆ 11 ಚಿನ್ನದ ‌ಪದಕ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2020, 8:06 IST
Last Updated 20 ನವೆಂಬರ್ 2020, 8:06 IST
ಜಯಶ್ರೀ ಶಿವಶರಣಪ್ಪ ಅವರಿಗೆ ಹಂಗಾಮಿ ಕುಲಪತಿ ಡಾ.ಚಂದ್ರಕಾಂತ ‌ಯಾತನೂರ ಅವರು ಚಿನ್ನದ ಪದಕ ಹಾಗೂ ಪ್ರಮಾಣಪತ್ರ ವಿತರಿಸಿದರು.
ಜಯಶ್ರೀ ಶಿವಶರಣಪ್ಪ ಅವರಿಗೆ ಹಂಗಾಮಿ ಕುಲಪತಿ ಡಾ.ಚಂದ್ರಕಾಂತ ‌ಯಾತನೂರ ಅವರು ಚಿನ್ನದ ಪದಕ ಹಾಗೂ ಪ್ರಮಾಣಪತ್ರ ವಿತರಿಸಿದರು.   

ಕಲಬುರ್ಗಿ: ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ‌11 ಚಿನ್ನದ ಪದಕಗಳನ್ನು ಪಡೆದ ಜಯಶ್ರೀ ಶಿವಶರಣಪ್ಪ ಅವರಿಗೆ ಹಂಗಾಮಿ ಕುಲಪತಿ ಡಾ.ಚಂದ್ರಕಾಂತ ‌ಯಾತನೂರ ಅವರು ಚಿನ್ನದ ಪದಕ ಹಾಗೂ ಪ್ರಮಾಣಪತ್ರವನ್ನು ವಿತರಿಸಿದರು.

ಇದೇ ಸಂದರ್ಭದಲ್ಲಿ ಮಂತ್ರಾಲಯದ ಸುಬುಧೇಂದ್ರ ತೀರ್ಥ ಸ್ವಾಮೀಜಿ ಅವರಿಗೆ ಅನುಪಸ್ಥಿತಿಯಲ್ಲಿ ‌ಗೌರವ ಡಾಕ್ಟರೇಟ್ ನೀಡಲಾಯಿತು.

ವಿಶ್ವವಿದ್ಯಾಲಯದ ಡಾ.ಅಂಬೇಡ್ಕರ್ ‌ಸಭಾಂಗಣದಲ್ಲಿ ನಡೆದ 38ನೇ ಘಟಿಕೋತ್ಸವದಲ್ಲಿ ಬೆಂಗಳೂರಿನ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆ (ಐಸೆಕ್) ನಿರ್ದೇಶಕ ‌ಡಾ.ಎಸ್. ಮಾದೇಶ್ವರನ್ ದಿಕ್ಸೂಚಿ ಭಾಷಣ ಮಾಡಿದರು.

ADVERTISEMENT

ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ ಅವರು ಆನ್ ಲೈನ್ ಮೂಲಕ ಸಂದೇಶ ನೀಡಿದರು.

ಕುಲಸಚಿವ ಪ್ರೊ.ಸಿ.ಸೋಮಶೇಖರ್, ಮೌಲ್ಯಮಾಪನ ‌ಕುಲಸಚಿವ ಪ್ರೊ. ಸಂಜೀವ ಕುಮಾರ್ ಹಾಗೂ ವಿವಿಧ ನಿಕಾಯಗಳ ಡೀನ್ ಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.