ADVERTISEMENT

ಕಲಬುರಗಿ: ಶೌಚಾಲಯದಲ್ಲಿ ಗುಟ್ಕಾ, ಸಿಗರೇಟ್ ಮಾರಾಟ!

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2024, 15:38 IST
Last Updated 3 ಸೆಪ್ಟೆಂಬರ್ 2024, 15:38 IST
ಕಲಬುರಗಿಯ ಗಂಜ್ ಪ್ರದೇಶದ ಸಾರ್ವಜನಿಕ ಶೌಚಾಲಯದಲ್ಲಿ ಮಾರಾಟಕ್ಕಿಟ್ಟ ಗುಟ್ಕಾ, ಸಿಗರೇಟ್‌ಗಳನ್ನು ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಸಚಿನ್ ಶಿರವಾಳ (ಮಧ್ಯದಲ್ಲಿ) ಹಾಗೂ ಪಾಲಿಕೆ ಅಧಿಕಾರಿಗಳು ಪರಿಶೀಲಿಸಿದರು 
ಕಲಬುರಗಿಯ ಗಂಜ್ ಪ್ರದೇಶದ ಸಾರ್ವಜನಿಕ ಶೌಚಾಲಯದಲ್ಲಿ ಮಾರಾಟಕ್ಕಿಟ್ಟ ಗುಟ್ಕಾ, ಸಿಗರೇಟ್‌ಗಳನ್ನು ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಸಚಿನ್ ಶಿರವಾಳ (ಮಧ್ಯದಲ್ಲಿ) ಹಾಗೂ ಪಾಲಿಕೆ ಅಧಿಕಾರಿಗಳು ಪರಿಶೀಲಿಸಿದರು    

ಕಲಬುರಗಿ: ನಗರದ ವಿವಿಧೆಡೆ ಸಾರ್ವಜನಿಕ ಶೌಚಾಲಯಗಳಲ್ಲಿ ಗುಟ್ಕಾ, ಸಿಗರೇಟ್ ಮಾರಾಟ ಮಾಡುವುದನ್ನು ಗಂಭೀರವಾಗಿ ಪರಿಗಣಿಸಿರುವ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಚಿನ್ ಶಿರವಾಳ ಶೌಚಾಲಯದ ಗುತ್ತಿಗೆ ಒಪ್ಪಂದವನ್ನು ರದ್ದುಗೊಳಿಸುವಂತೆ ಶಿಫಾರಸು ಮಾಡಿದ್ದಾರೆ.

ನಗರದ ವಿವಿಧ ಭಾಗಗಳಲ್ಲಿ ಮಂಗಳವಾರ ಸಾರ್ವಜನಿಕ ಶೌಚಾಲಯಗಳನ್ನು ಪರಿಶೀಲನೆ ಮಾಡಿದ ಸಂದರ್ಭದಲ್ಲಿ ಗಂಜ್ ಶೌಚಾಲಯದಲ್ಲಿ ಸ್ವಚ್ಛತೆ ಕಾಯ್ದುಕೊಂಡಿರಲಿಲ್ಲ. ಅಲ್ಲದೇ, ಗುಟ್ಕಾ ಹಾಗೂ ಸಿಗರೇಟ್ ಮಾರಾಟ ಮಾಡುವುದು ಕಂಡು ಬಂದಿರುತ್ತದೆ. ಒಪ್ಪಂದದ ಷರತ್ತುಗಳು ಪಾಲನೆ ಆಗಿಲ್ಲ ಮತ್ತು ಪರಿಸರ ಹಾಳು ಮಾಡಿರುವುದನ್ನು ಗಮನಿಸಿ ಆಯುಕ್ತರಿಗೆ ಕರೆ ಮಾಡಿದ ಶಿರವಾಳ ಅವರು ಕೂಡಲೇ ಅವರ ಒಪ್ಪಂದವನ್ನು ರದ್ದುಪಡಿಸಿ ಎಂದು ಹೇಳಿದರು. 

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರು ಭಾಗವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.