ADVERTISEMENT

ಕಮಲಾಪುರ | ಧಾರಾಕಾರ ಮಳೆ: ಮನೆಗಳಿಗೆ ಹೊಕ್ಕಿದ ನೀರು, ಕಾಳಜಿ ಕೇಂದ್ರದಲ್ಲಿ ಆಶ್ರಯ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2025, 5:42 IST
Last Updated 15 ಸೆಪ್ಟೆಂಬರ್ 2025, 5:42 IST
ಕಮಲಾಪುರ ತಾಲ್ಲೂಕಿನ ಡೊಂಗರಗಾಂವ ಗ್ರಾಮದಲ್ಲಿ ಸುರಿದ ಧಾರಕಾರ ಮಳೆಗೆ ಮನೆಗಳಿಗೆ ನುಗ್ಗಿದ ನೀರು
ಕಮಲಾಪುರ ತಾಲ್ಲೂಕಿನ ಡೊಂಗರಗಾಂವ ಗ್ರಾಮದಲ್ಲಿ ಸುರಿದ ಧಾರಕಾರ ಮಳೆಗೆ ಮನೆಗಳಿಗೆ ನುಗ್ಗಿದ ನೀರು   

ಕಮಲಾಪುರ: ತಾಲ್ಲೂಕಿನ ಡೊಂಗರಗಾಂವ, ಕಿಣ್ಣ ಸಡಕ ನಲ್ಲಿ ಸುರಿದ ಧಾರಾಕಾರ ಮಳೆಗೆ ಮನೆಗಳಿಗೆ ನೀರು ಹೊಕ್ಕು ಅಪಾರ ಪ್ರಮಾಣದ ಹಾನಿಯಾಗಿದೆ.

ಡೊಂಗರಗಾಂವ ಗ್ರಾಮದ ಜಮೀನುಗಳಿಂದ ಹರಿದು ಬಂದ ನೀರಿನ ಪ್ರವಾಹ ಊರೊಳಗೆ ಹೊಕ್ಕಿದೆ. ಅನೇಕ ಮನೆಗಳಲ್ಲಿ ಪ್ರವಾಹ ನೀರು ಸೇರಿದವು. ಮಂಜುಳಾ ರಾಜಕುಮಾರ ದೇಶಮುಖ, ಸುರೇಖಾ ಕಂಬಾರ ಗುಂಡಮ್ಮ ಕಂಬಾರ ಶಿವಾಜಿ ಕಂಬಾರ ಭೋಜಪ ಕಂಬಾರ ತುಳಸಿ ರಾಮಣ ಕಂಬಾರ, ಕಂಟೆಪ್ಪ ಅಕ್ಕಭೈ , ಚಂದಪ್ಪ ನರುಣಿ , ಸೂರಪ್ಪ ಕಂಬಾರ, ಸುರೇಖಾ ಕಂಬಾರ, ಗುಂಡಮ್ಮ ಕಂಬಾರ, ಲತಾ ಕಂಬಾರ ಅವರ ಮನೆಗಳಿಗೆ ನೀರು ಹೊಕ್ಕಿದ್ದು, ಗೊಡೆಗಳಿಂದ ನೀರು ಜಿನುಗುತ್ತಿದ್ದವು. ಮನೆಯೊಳಗೆ ಶೇಖರಿಸಿಟ್ಟ ಧವಸ ಧಾನ್ಯಗಳೆಲ್ಲ ತೊಯ್ದುತೆಪ್ಪೆಯಾಗಿ. ಅಪಾರ ಹಾನಿಯಾಗಿದೆ.

ತಹಶೀಲ್ದಾರ ಮೊಹಮ್ಮದ ಮೋಸಿನ ಅಹಮ್ಮದ ಭೇಟಿ ನೀಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾಳಜಿ ಕೇಂದ್ರ ತೆರಿದಿದ್ದು ಸದ್ಯ ಕೆಲವರಿಗೆ ಅಲ್ಲಿಯೆ ಆಶ್ರಯ ನೀಡಲಾಗಿದೆ.

ADVERTISEMENT
ಕಮಲಾಪುರ ತಾಲ್ಲೂಕಿನ ಡೊಂಗರಗಾಂವ ಗ್ರಾಮದಲ್ಲಿ ಮನೆಗಳಿಗೆ ನುಗ್ಗಿದ ನೀರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.