ಚಿಂಚೋಳಿ: ತಾಲ್ಲೂಕಿನಲ್ಲಿ ಸೋಮವಾರ ತಡ ರಾತ್ರಿ ಗುಡುಗು ಮಿಂಚು ಸಹಿತ ರಭಸದ ಮಳೆ ಸುರಿದಿದೆ.
ರಾತ್ರಿ 11.45ಕ್ಕೆ ಆರಂಭವಾದ ಮಳೆ 12.10ವರೆಗೂ ಮುಂದುವರೆದಿತ್ತು.
ಈ ಅಕಾಲಿಕ ಮಳೆ ಸುರಿದಿದ್ದು ತೊಗರಿ ರಾಶಿಗೆ ತೊಂದರೆಯಾಗಲಿದೆ. ಜೋಳದ ಬೆಳೆಯು ತೆನೆ ಬಿಟ್ಟು ಹೂವಾಡುವ ಹಂತದಲ್ಲಿದೆ. ಈ ಹಂತದಲ್ಲಿ ಸುರಿದ ಮಳೆಯಿಂದ ಹೂ ಉದುರುವ ಭೀತಿ ರೈತರನ್ನು ಕಾಡುತ್ತಿದೆ.
ಕಲಬುರಗಿ ನಗರದಲ್ಲಿ ಕೂಡ ರಾತ್ರಿ 2ರ ನಂತರ ಅರ್ಧ ತಾಸು ತುಂತುರು ಮಳೆ ಸುರಿಯಿತು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.