ADVERTISEMENT

‘ಹೇಮರೆಡ್ಡಿ ಮಲ್ಲಮ್ಮ’ ನಾಟಕೋತ್ಸವ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2022, 8:25 IST
Last Updated 1 ಮಾರ್ಚ್ 2022, 8:25 IST
ಜೇವರ್ಗಿ ತಾಲ್ಲೂಕಿನ ಗೌನಹಳ್ಳಿ ಗ್ರಾಮದಲ್ಲಿ ಕಲಾವಿದರು ಹೇಮರೆಡ್ಡಿ ಮಲ್ಲಮ್ಮ ನಾಟಕವನ್ನು ಪ್ರದರ್ಶಿಸಿದರು
ಜೇವರ್ಗಿ ತಾಲ್ಲೂಕಿನ ಗೌನಹಳ್ಳಿ ಗ್ರಾಮದಲ್ಲಿ ಕಲಾವಿದರು ಹೇಮರೆಡ್ಡಿ ಮಲ್ಲಮ್ಮ ನಾಟಕವನ್ನು ಪ್ರದರ್ಶಿಸಿದರು   

ಕಲಬುರಗಿ: ಟಿ.ವಿ ಮಾಧ್ಯಮ ಇಲ್ಲದ ಸಮಯದಲ್ಲಿ ನಾಟಕಗಳು ಜನರ ಮನರಂಜನೆಯ ಮಾಧ್ಯಮವಾಗಿದ್ದವು. ಜನರು ತಪ್ಪದೇ ನಾಟಕಗಳನ್ನು ನೋಡಿ ಪ್ರೋತ್ಸಾಹ ಕೊಡಬೇಕು. ಆ ಮೂಲಕ ನಾಡಿಕ ಸಂಸ್ಕೃತಿ ಉಳಿಸಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಂದ್ರಪ್ಪ ಪೊಲೀಸ್ ಪಾಟೀಲ ಹೇಳಿದರು.

ಜೇವರ್ಗಿ ತಾಲ್ಲೂಕಿನ ಗೌನಹಳ್ಳಿ ಗ್ರಾಮದ ಇಲ್ಲಿನ ಜೇವರ್ಗಿ ತಾಲ್ಲೂಕಿನ ಗೌನಹಳ್ಳಿ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಸಿದ್ಧರಾಮೇಶ್ವರ ಬುಡ್ಗ ಜಂಗಮ ಜನಪದ ನಾಟ್ಯ ಕಲಾ ಸಂಘದ ವತಿಯಿಂದ ಈಚೆಗೆ ಆಯೋಜಿಸಿದ್ದ ‘ಹೇಮರೆಡ್ಡಿ ಮಲ್ಲಮ್ಮ’ ನಾಟಕೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

’ಐತಿಹಾಸಿಕ ನಾಟಕಗಳು ಇತ್ತೀಚೆಗೆ ಮರೆಯಾಗುತ್ತಿವೆ. ಇಂದಿಗೂ ವೃತ್ತಿಪರ ಕಲಾವಿದರು ಐತಿಹಾಸಿ ಹಾಗೂ ಸಾಮಾಜಿಕ ನಾಟಕಗಳನ್ನು ಪ್ರದರ್ಶಿಸುತ್ತಿದ್ದಾರೆ. ಹಿಂದಿನ ನಾಟಕಗಳ ವೈಭವವನ್ನು ನೆನಪು ಮಾಡಿಕೊಂಡರೆ ಖುಷಿಯಾಗುತ್ತದೆ’ ಎಂದರು.

ADVERTISEMENT

ನಿಂಗಣ್ಣ ಗೌಡ ಪೊಲೀಸ್ ಪಾಟೀಲ, ತಿಪ್ಪಣ್ಣ ಗೌನಹಳ್ಳಿ, ಹಣಮಂತರಾಯ ಅಪ್ಪಾಜಿ, ಮಡಿವಾಳಪ್ಪಗೌಡ ಬಿರಾದಾರ, ಮಂಜುನಾಥ ಅಪ್ಪಾಜಿ ಹಾಗೂ ಕಲಾವಿದರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.