ADVERTISEMENT

ಕಾಂಗ್ರೆಸ್‌ 10 ಮತ ಲೀಡ್‌ ಪಡೆದರೆ ರಾಜೀನಾಮೆ: ಶಾಸಕ ಬಸವರಾಜ ಮತ್ತಿಮಡು ಸವಾಲು

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2024, 15:49 IST
Last Updated 25 ಏಪ್ರಿಲ್ 2024, 15:49 IST
ಕಮಲಾಪುರ ರೇವಣಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಶಾಸಕ ಬಸವರಾಜ ಮತ್ತಿಮಡು ಮಾತನಾಡಿದರು
ಕಮಲಾಪುರ ರೇವಣಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಶಾಸಕ ಬಸವರಾಜ ಮತ್ತಿಮಡು ಮಾತನಾಡಿದರು   

ಕಮಲಾಪುರ: ‘ಕಲಬುರಗಿ ಗ್ರಾಮೀಣ ಮತಕ್ಷೇತ್ರದಿಂದ ಕಾಂಗ್ರೆಸ್‌ ಬಿಜೆಪಿಗಿಂತ ಕೇವಲ 10 ಮತ ಹೆಚ್ಚು ಪಡೆದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ’ ಎಂದು ಶಾಸಕ ಬಸವರಾಜ ಮತ್ತಿಮಡು ಸವಾಲು ಹಾಕಿದರು.

ಕಮಲಾಪುರ ರೇವಣಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಬುಧವಾರ ಆಯೋಜಿಸಿದ್ದ ಲೋಕಸಭೆ ಚುನಾವಣೆ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ಗ್ರಾಂಈಣ ಮತಕ್ಷೇತ್ರಕ್ಕೆ ಹಿಂದೆ ಒಂದೂ ಬಾರಿಯೂ ಭೇಟಿ ನೀಡದ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ ಚುನಾವಣೆ ನಿಮಿತ್ತ ಮೇಲಿಂದ ಮೇಲೆ ಸೊಂತ, ಕಮಲಾಪುರ, ಮಹಾಗಾಂವ ಮತ್ತಿತರ ಕಡೆ ಸುತ್ತಾಡುತ್ತಿದ್ದಾರೆ. ಎಷ್ಟೇ ತಿಪ್ಪರಲಾಗ ಹೊಡೆದರೂ ಗ್ರಾಮೀಣ ಕ್ಷೇತ್ರದಲ್ಲಿ ಮತಪಡೆಯಲು ಸಾಧ್ಯವಿಲ್ಲ. ಬಿಜೆಪಿಗೆ 25 ಸಾವಿರ ಮತಗಳ ಲೀಡ್ ದೊರೆಯಲಿದೆ’ ಎಂದರು.

ADVERTISEMENT

ಮಾಜಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ, ಬಿಜೆಪಿ ಅಭ್ಯರ್ಥಿ ಉಮೇಶ ಜಾಧವ ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಸವರಾಜ ಮಾಲಿಪಾಟೀಲ, ಶಿವಶೆಟ್ಟಿ ಪಾಟೀಲ, ಶಶಿಕಲಾ ಟೇಂಗಳಿ, ಅಮೃತಪ್ಪ ದೋಶೆಟ್ಟಿ, ರಾಜಕುಮಾರ ಕೋಟಿ, ಉದಯ ರಟಕಲ್‌, ರಾಜು ದೋಶೆಟ್ಟಿ, ಸಂಗಮೇಶ ವಾಲಿ, ಗಂಗಪ್ಪಗೌಡ ಪಾಟೀಲ, ಪ್ರವೀಣ ಮುಚ್ಛಟ್ಟಿ, ಜಗನ್ನಾಥ ಮಾಲಿಪಾಟೀಲ, ಶಿವಾ ದೋಶೆಟ್ಟಿ, ಸುರೇಶ ರಾಠೋಡ್, ಶರಣು ರಟಕಲ್‌, ಬಸವರಾಜ ಚಿಕ್ಕೆಗೌಡ, ನಾಗರಾಜ ಹುಣಚಿಗಿಡ, ಶ್ರೀಶೈಲ ದೋಶೆಟ್ಟಿ, ಮಹೇಶ ಪಾಟೀಲ, ರವಿ ಕೋರಿ, ರಾಜಶೇಖರ ಕಚೇರಿ, ರಾಜಕುಮಾರ ಗಬರಾದಿ, ಶರಣಬಸಪ್ಪ ಹುಡಗಿ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.