ಅಫಜಲಪುರ: ‘ಕಾಂಗ್ರೆಸ್ ಪಕ್ಷ ರಾಜ್ಯದಂತೆ ಕೇಂದ್ರದಲ್ಲಿಯೂ ಗ್ಯಾರಂಟಿ ಜಾರಿ ಮಾಡುವ ಯೋಜನೆ ಹಮ್ಮಿಕೊಂಡು ಪ್ರಣಾಳಿಕೆ ಹೊರಡಿಸಿದೆ. ಅಧಿಕಾರಕ್ಕೆ ಬಂದ ತಕ್ಷಣ ಅವುಗಳನ್ನು ಅನುಷ್ಠಾನ ಗೊಳಿಸಲಾಗುವುದು. ಅದಕ್ಕಾಗಿ ಪ್ರತಿಯೊಬ್ಬರೂ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರಿಗೆ ಮತ ನೀಡಬೇಕು’ ಎಂದು ಫರತಾಬಾದ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಶಾಕ್ ಪಟೇಲ್ ಕೋರಿದರು.
ಅಫಜಲಪುರ ಮತಕ್ಷೇತ್ರದ ಹಸನಾಪುರ ಗ್ರಾಮದಲ್ಲಿ ಕಲಬುರಗಿ ಲೋಕಸಭಾ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಪರ ನೆಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಕೆಪಿಸಿಸಿ ಸದಸ್ಯ ಅರುಣಕುಮಾರ ಎಂ. ಪಾಟೀಲ ಮಾತನಾಡಿ, ‘ಬಿಜೆಪಿ ಜಾತಿ, ಧರ್ಮದ ಭಾವನೆಯನ್ನು ಕೆರಳಿಸಿ, ತಪ್ಪು ದಾರಿಗೆ ಎಳೆಯುವ ಮೂಲಕ 3ನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು ಹವಣಿಸುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸೋಮಶೇಖರ ಕಲಬುರ್ಗಿ, ಜ್ಯೋತಿ ಮಾರಗೊಳ, ಸಿದ್ದಣ್ಣ ವಾರದ, ಮಹೇಶ ಕೌಲಗಿ, ಸುರೇಶ ತಿಪ್ಪಶೆಟ್ಟಿ , ಶ್ರೀನಾಥ ದೊಡ್ಡಮನಿ, ಬಸವರಾಜ ಜೋಗುರ, ಚಂದ್ರಕಾಂತ, ರಾಜಾ ಪಟೇಲ್, ಮಲ್ಲಿನಾಥ ಪಾಟೀಲ, ಸೈಯದ ಹೇರೂರ, ಶರಣು ಮಂದರವಾಡ, ಸೈಬಣ್ಣ ನಿಲ್ಲಪ್ಪಗೊಳ, ಸಂಗಮನಾಥ ರಭಶೆಟ್ಟಿ, ಶರಣು ಶಿರೂರ, ಯೋನುಸ್ ಪಟೇಲ್, ರಮೇಶ ನಾಟಿಕಾರ ಹಾಗೂ ಕಾರ್ಯಕರ್ತರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.