ADVERTISEMENT

ಕಲಬುರ್ಗಿ | ಗಾಯಗೊಂಡಿದ್ದ ಮುಳ್ಳು ‌ಹಂದಿ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2020, 9:52 IST
Last Updated 22 ಜುಲೈ 2020, 9:52 IST
ಮುಳ್ಳು ಹಂದಿ
ಮುಳ್ಳು ಹಂದಿ   

ಕಲಬುರ್ಗಿ: ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದ ನೃಪತುಂಗ ವಸತಿಗೃಹದ ಬಳಿ ಅಪಘಾತದಲ್ಲಿ ಗಾಯಗೊಂಡು ಸಂಕಟಪಡುತ್ತಿದ್ದ ಮುಳ್ಳು ಹಂದಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿದ್ದಾರೆ.

ವಿ.ವಿ.‌ ಆವರಣದಲ್ಲಿ ಬುಧವಾರ ಬೆಳಿಗ್ಗೆ ವಾಯುವಿಹಾರಕ್ಕೆ ತೆರಳಿದ್ದ ಪೂಜಾ ಕಾಲೊನಿ ನಿವಾಸಿ ಭೀಮಸಿಂಗ ರಾಠೋಡ ಮುಳ್ಳುಹಂದಿಯ ಹಿಂಬದಿಯ ಕಾಲುಗಳಿಗೆ ಗಾಯವಾಗಿರುವುದನ್ನು ಗಮನಿಸಿ ವಲಯ ಅರಣ್ಯಾಧಿಕಾರಿ ಸುನೀಲಕುಮಾರ ಚವ್ಹಾಣ ಅವರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ‌ಬಂದ ಅರಣ್ಯ ಇಲಾಖೆ ಸಿಬ್ಬಂದಿ ಮುಳ್ಳುಹಂದಿಯನ್ನು ರಕ್ಷಿಸಿ ‌ಕರೆದೊಯ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.