ADVERTISEMENT

ಕಮಲಾಪುರ | ಮಾನವ ಸರಪಳಿ ಯಶಸ್ವಿಗೊಳಿಸಿ: ತಡಕಲ್

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2024, 14:05 IST
Last Updated 13 ಸೆಪ್ಟೆಂಬರ್ 2024, 14:05 IST
ವೈಜನಾಥ ತಡಕಲ್
ವೈಜನಾಥ ತಡಕಲ್   

ಕಮಲಾಪುರ: ‘ಜಾತಿ, ಮತ, ಪಂಥ, ಪಕ್ಷ, ಪ್ರತಿಷ್ಠೆ ಬದಿಗಿಟ್ಟು ಪ್ರಜಾಪ್ರಭುತ್ವದ ದಿನವನ್ನು ವಿಭಿನ್ನವಾಗಿ ಆಚರಿಸುತ್ತಿರುವ ಸರ್ಕಾರದ ನಡೆಯನ್ನು ಬೆಂಬಲಿಸಲು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುವ ಮೂಲಕ ಸೆ.15ರಂದು ಆಯೋಜಿಸಿರುವ ಮಾನವ ಸರಪಳಿಯನ್ನು ಯಶಸ್ವಿಗೊಳಿಸಬೇಕು’ ಎಂದು ಕಮಲಾಪುರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವೈಜನಾಥ ತಡಕಲ್ ಕರೆ ನೀಡಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಅವರು, ‘ಸೆ.15ರಂದು ವಿಶ್ವದಾದ್ಯಂತ ಪ್ರಜಾಪ್ರಭುತ್ವ ದಿನ ಆಚರಿಸಲಾಗುತ್ತಿದೆ. ಅನುಭವ ಮಂಟಪದ ಮೂಲಕ ಇಡೀ ವಿಶ್ವಕ್ಕೆ ಮೊಟ್ಟಮೊದಲ ಬಾರಿಗೆ ಸಂಸತ್ತು, ಪ್ರಜಾಪ್ರಭುತ್ವದ ಮಾದರಿ ಪರಿಚಯಿಸಿದ್ದು ನಮ್ಮ ಕಲ್ಯಾಣ ನಾಡಿನ ಬಸವಾದಿ ಶರಣರು. ಇದನ್ನು ಪ್ರಚಾರ ಪಡಿಸುವಲ್ಲಿ ನಾವು ಹಿಂದೆ ಬಿದ್ದಿದ್ದೇವೆ. ಈ ವಿಷಯ ಮುನ್ನೆಲೆಗೆ ತರಲು ಬಸವಾದಿ ಶರಣರು ಸ್ಥಾಪಿತ ಬಸವಕಲ್ಯಾಣದಲ್ಲಿನ ಅನುಭವ ಮಂಟಪದಿಂದಲೇ ಈ ಮಾನವ ಸರಪಳಿ ಆರಂಭವಾಗಿ ರಾಜ್ಯದ ಎಲ್ಲ ಜಿಲ್ಲೆಗಳನ್ನು ಒಳಗೊಂಡು ಚಾಮರಾಜನಗರದಲ್ಲಿ ಮುಕ್ತಾಯಗೊಳ್ಳಲಿದೆ. ಪ್ರಜಾಪ್ರಭುತ್ವದ, ಸಂವಿಧಾನದ ಮಹತ್ವ ಸಾರುವ ಈ ವಿನೂತನ ಮಾನವ ಸರಪಳಿ ರಾಜ್ಯದಲ್ಲಿ ಮಾತ್ರ ಆಯೋಜಿಸಿದ್ದು, ವಿಶ್ವಕ್ಕೆ ಮಾದರಿಯಾಗಲಿದೆ ಇದನ್ನು ಬೆಂಬಲಿಸುವುದು ರಾಜ್ಯದ ಪ್ರತಿಯೊಬ್ಬ ನಾಗರಿಕನ ಕರ್ತವ್ಯ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT