ADVERTISEMENT

ಹಲಕರ್ಟಿ: ಪಿಕೆಪಿಎಸ್‌ಗೆ ಈರಣ್ಣ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 3 ಜೂನ್ 2025, 14:57 IST
Last Updated 3 ಜೂನ್ 2025, 14:57 IST
ವಾಡಿ ಸಮೀಪದ ಹಲಕರ್ಟಿ ಕೃಷಿ ಪ್ರಾಥಮಿಕ ಪತ್ತಿನ ಸಹಕಾರ ಸಂಘಕ್ಕೆ ಆಯ್ಕೆಯಾದ ಅಧ್ಯಕ್ಷ ಉಪಾಧ್ಯಕ್ಷರನ್ನು ಸನ್ಮಾನಿಸಲಾಯಿತು
ವಾಡಿ ಸಮೀಪದ ಹಲಕರ್ಟಿ ಕೃಷಿ ಪ್ರಾಥಮಿಕ ಪತ್ತಿನ ಸಹಕಾರ ಸಂಘಕ್ಕೆ ಆಯ್ಕೆಯಾದ ಅಧ್ಯಕ್ಷ ಉಪಾಧ್ಯಕ್ಷರನ್ನು ಸನ್ಮಾನಿಸಲಾಯಿತು   

ವಾಡಿ: ಚಿತ್ತಾಪುರ ತಾಲ್ಲೂಕಿನ ಹಲಕರ್ಟಿ ಗ್ರಾಮದ ಕೃಷಿ ಪ್ರಾಥಮಿಕ ಪತ್ತಿನ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷ  ಅಧ್ಯಕ್ಷರಾಗಿ ಈರಣ್ಣ ಇಸಬಾ ಹಾಗೂ ಉಪಾಧ್ಯಕ್ಷರಾಗಿ ಶರಣು ಬೊಮ್ಮನಹಳ್ಳಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 

ಮೇ.20ರಂದು ಸಹಕಾರ ಸಂಘಕ್ಕೆ ನೂತನ ಸದಸ್ಯರ ಆಯ್ಕೆಗೆ ಚುನಾವಣೆ ಜರುಗಿತ್ತು. ಚೇತನ್ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.

ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ಘೋಷಣೆಯಾಗುತ್ತಿದ್ದಂತೆ ಬೆಂಬಲಿಗರು ಪಟಾಕಿ ಹಚ್ಚಿ ಸಿಹಿ ಹಂಚಿ ಸಂಭ್ರಮಿಸಿದರು.

ADVERTISEMENT

ಈ ಸಂದರ್ಭದಲ್ಲಿ ಸದಸ್ಯರಾದ ಇಮ್ತಿಯಾಜ್ ಪಟೇಲ್, ಮುನಿಯಪ್ಪ ಇಸಬಾ, ಶರಣಪ್ಪ ಮಾರಡಗಿ, ಭಾಗಣ್ಣ ಬುಕ್ಕಾ, ಮಲ್ಲಿಕಾರ್ಜುನ ಮಾಳಗಿ, ಶ್ರೀಧರ್ ಬಳವಡಗಿ, ಮೊತಿಲಾಲ, ಸುನಂದ ಗುರೆಗೋಳ, ವೀರೇಶ ಕೊಟಗಿ ಸ್ಥಳೀಯ ಮುಖಂಡರಾದ, ಜಗದೀಶ ಸಿಂಧೆ, ಮಲ್ಲಣ್ಣ ಸಂಗಶೆಟ್ಟಿ, ಶಿವಣ್ಣ ಹಿಟ್ಟಿನ, ರಾಜುಗೌಡ ಪೊಲೀಸ್ ಪಾಟೀಲ, ಚಂದ್ರಕಾಂತ ಕೋಲಕುಂದಿ, ದೇವೇಗೌಡ ಬಳವಡಗಿ, ಚಂದ್ರಕಾಂತ ಮೇಲಿನಮನಿ, ಇಬ್ರಾಹಿಂ ಪಟೇಲ್, ಬಸಣ್ಣ ಜೈನಾಪುರ, ಸೂರ್ಯಕಾಂತ ರದ್ದೇವಾಡಿ, ಸಾಬಣ್ಣ ಹಿಟ್ಟಿನ, ಸಿದ್ದು ಮುಗಟಿ, ಕರಣಪ್ಪ ಇಸಬಾ, ರಾಘವೇಂದ್ರ ಅಲ್ಲಿಪೂರ, ಹೀರಾ ಜಾಧವ, ಮಲ್ಲಿಕಾರ್ಜುನ ಹಣಿಕೇರಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯನಿರ್ವಹಣಾ ಅಧಿಕಾರಿಗಳಾದ ಈರಣ್ಣ ಪರ್ವತರೆಡ್ಡಿ ಸೇರಿದಂತೆ ಇನ್ನಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.