ಕಲಬುರಗಿ: ‘ಫ್ಲಾರಿಡಾದಲ್ಲಿ ಜರುಗಿದ ಅಂತರರಾಷ್ಟ್ರೀಯ ಬಾಹ್ಯಾಕಾಶ ಸಮ್ಮೇಳನದಲ್ಲಿ ಪಾಲ್ಗೊಂಡು ಬಹುಮಾನ ಪಡೆದಿರುವ ಎಸ್.ಆರ್.ಎನ್ ಮೆಹತಾ ಸಿಬಿಎಸ್ಇ ಶಾಲೆ ವಿದ್ಯಾರ್ಥಿಗಳಿಗೆ ಇನ್ನಷ್ಟು ಅಧ್ಯಯನ ಕೈಗೊಳ್ಳಲು ಮುಂದಿನ ದಿನಗಳಲ್ಲಿ ಇಸ್ರೊದಿಂದ ಮೆಂಟರ್‌ಶಿಪ್ (ಮಾರ್ಗದರ್ಶನ) ಕೊಡಿಸಲಾಗುವುದು’ ಎಂದು ಪಾಟೀಲ ಗ್ರುಪ್ ಆಫ್ ಇಂಡಸ್ಟ್ರಿಸ್ ಮುಖ್ಯಸ್ಥ ಎಲ್.ಎಸ್.ಪಾಟೀಲ ಹೇಳಿದರು.
ನಗರದ ಕೆಕೆಸಿಸಿಐ ಸಭಾಂಗಣದಲ್ಲಿ ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಭಾನುವಾರ ಹಮ್ಮಿಕೊಂಡಿದ್ದ ‘ರಿಜಿನಲ್ ಫ್ರೈಡ್–ಗ್ಲೋಬಲ್ ರಿಕಗ್ನೇಷನ್’ ಕಾರ್ಯಕ್ರಮದಲ್ಲಿ ಮೆಹತಾ ಶಾಲಾ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
‘ವಿದ್ಯಾರ್ಥಿಗಳು ರೂಪಿಸಿರುವ ಮಾದರಿ ಯೋಜನೆಗಳು ಶ್ರೇಷ್ಠವಾಗಿವೆ. ಈ ಕುರಿತು ಇಸ್ರೊ ಸಂಸ್ಥೆಯ ಮುಖ್ಯಸ್ಥರ ಜತೆಗೆ ಮಾತನಾಡಿದ್ದೇನೆ. ವಿದ್ಯಾರ್ಥಿಗಳ ಪರಿಕಲ್ಪನೆಯು ಪ್ರಥಮ ಬಹುಮಾನಕ್ಕೆ ಸೀಮಿತಗೊಳ್ಳಬಾರದು. ಅದು ಮುಂದುವರಿಯಬೇಕು. ಅದಕ್ಕಾಗಿ ಮುಂದಿನ ದಿನಗಳಲ್ಲಿ ಅವರಿಗೆ ಸಂಶೋಧನೆ ಇಲ್ಲವೇ ಮಾದರಿ ರೂಪಿಸಲು ಬೇಕಾಗುವ ಸಲಹೆ ಜತೆಗೆ ಅಧ್ಯಯನ ಮುಂದುವರಿಸಲು ಇಸ್ರೊ ನೆರವು ನೀಡಲಿದೆ’ ಎಂದರು.
ಅಲ್ಲದೇ ಸ್ಪರ್ಧೆಯಲ್ಲಿ ಪಾಲ್ಗೊಂಡು ಪ್ರಥಮ ಬಹುಮಾನ ಪಡೆದ ಎಲ್ಲ ವಿದ್ಯಾರ್ಥಿಗಳಿಗೆ ತಲಾ ₹15 ಸಾವಿರ ಬಹುಮಾನ ಘೋಷಿಸಿದರು.
ಇದೇ ವೇಳೆ, ಪಾಟೀಲ ಗ್ರುಪ್ ಆಫ್ ಇಂಡಸ್ಟ್ರಿಸ್ ಮುಖ್ಯಸ್ಥ ಎಲ್.ಎಸ್.ಪಾಟೀಲ ಅವರನ್ನು ಕೆಕೆಸಿಸಿಐನಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು. ಸಮಾರಂಭವನ್ನು ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ, ಮುಖ್ಯ ಅತಿಥಿಗಳಾಗಿದ್ದ ಎಚ್‌ಕೆಇ ಸಂಸ್ಥೆಯ ಅಧ್ಯಕ್ಷ ಶಶೀಲ್ ನಮೋಶಿ ಮಾತನಾಡಿದರು.
ಕೆಕೆಸಿಸಿಐ ಮಾಜಿ ಅಧ್ಯಕ್ಷರಾದ ಉಮಾಕಾಂತ ನಿಗ್ಗುಡಗಿ, ಶಶಿಕಾಂತ ಪಾಟೀಲ, ಸಮಾಜ ಸೇವಕಿ ಸರೋಜಿನಿ ಎಸ್.ಪಾಟೀಲ, ಉದ್ಯಮಿ ಸಿದ್ದಲಿಂಗ ಎಸ್. ಪಾಟೀಲ, ಎಸ್‌ಆರ್‌ಎನ್ ಮೆಹತಾ ಶಾಲೆಯ ಮುಖ್ಯಸ್ಥರಾದ ಪ್ರೀತಮ್ ಮೆಹತಾ, ಚಕೋರ ಮೆಹತಾ, ಮಹಾಲಕ್ಷ್ಮಿ ಗ್ರೂಪ್ ಮುಖ್ಯಸ್ಥ ರಾಘವೇಂದ್ರ ಮೈಲಾಪುರ, ಕಿರಾಣಾ ಬಜಾರ ಅಸೋಸಿಯೇಷನ್ ಅಧ್ಯಕ್ಷ ರವೀಂದ್ರ ಮಾದಮಶೆಟ್ಟಿ, ದಾಲ್ ಮಿಲ್ ಅಸೋಸಿಯೇಷನ್ ಅಧ್ಯಕ್ಷ ಚಂದ್ರಶೇಖರ ಕೋಬಾಳ, ಉಪಾಧ್ಯಕ್ಷ ಶರಣಬಸಪ್ಪ ಮುಚ್ಚೆಟ್ಟಿ, ಕೆಕೆಸಿಸಿಐ ಕಾರ್ಯದರ್ಶಿ ಶಿವರಾಜ ಇಂಗಿನಶೆಟ್ಟಿ, ಸದಸ್ಯರಾದ ದಿನೇಶ ಪಾಟೀಲ್, ಉತ್ತಮ ಬಜಾಜ್, ರವೀಂದ್ರ ಮುಕ್ಕಾ, ಗಿರೀಶ ಅಣಕಲ್, ರಾಹುಲ್ ಟೆಂಗಳಿ, ಲಿಂಗರಾಜ ಭಾವಿಕಟ್ಟಿ, ಸಂತೋಷ ನಂದ್ಯಾಳ, ಸಂದೀಪ ಮಿಶ್ರಾ, ಜಗದೀಶ ಪಾಟೀಲ್, ರಾಜಕುಮಾರ ದುಖಾನದಾರ್, ವಿಜಯ ಗಿಲ್ಡಾ, ವಿನಯ ಚಿಕ್ಕಟವಾರ್, ಶರಣರಡ್ಡಿ ಬೆಡಸೂರ, ಮಹಾದೇವ ಖೇಣಿ, ಮಹೇಶ ಮಠ ಇದ್ದರು.
ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಉದ್ಯಮಿ ಎಲ್.ಎಸ್.ಪಾಟೀಲ ಅವರನ್ನು ಕೆಕೆಸಿಸಿಐಗೆ ಆಹ್ವಾನಿಸಿ ಹಿರಿಯ ಉದ್ಯಮಿಗಳಿಂದ ಸನ್ಮಾನಿಸಿದ್ದು ಐತಿಹಾಸಿಕ ಗಳಿಗೆಶರಣಬಸಪ್ಪ ಪಪ್ಪಾ ಕೆಕೆಸಿಸಿಐ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.