ADVERTISEMENT

ಇಟಗಾ: ಜನತಾ ಜಲಧಾರೆ ಯಾತ್ರೆಗೆ ಚಾಲನೆ

ಭೀಮಾ ನದಿಯಲ್ಲಿ ಗಂಗಾ ಪೂಜೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2022, 7:18 IST
Last Updated 21 ಏಪ್ರಿಲ್ 2022, 7:18 IST
ಜೇವರ್ಗಿ ತಾಲ್ಲೂಕಿನ ಇಟಗಾ ಗ್ರಾಮದ ಭೀಮಾ ನದಿಯ ದಡದಲ್ಲಿ ಬುಧವಾರ ಜನತಾ ಜಲಧಾರೆ ಕಾರ್ಯಕ್ರಮಕ್ಕೆ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಕೇದಾರಲಿಂಗಯ್ಯ ಹಿರೇಮಠ ಚಾಲನೆ ನೀಡಿದರು. ಶಿವಕುಮಾರ ನಾಟೀಕಾರ, ಮಹೇಶ್ವರಿ ವಾಲಿ, ಎ.ಬಿ.ಹಿರೇಮಠ ಭೀಮಾ ನದಿಯಲ್ಲಿ ವಿಶೇಷ ಪೂಜೆ ಸಲ್ಲಿಸುವ ವೇದಮೂರ್ತಿ ಶರಣಯ್ಯ ಸ್ವಾಮಿ, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಖಾನಗೌಡರ, ಭಗವಂತರಾಯಗೌಡ ಅಂಕಲಗಾ, ಶಾಮರಾವ್ ಸೂರನ್, ಶಿವಾನಂದ ದ್ಯಾಮಗೊಂಡ, ಶಂಕರ ಕಟ್ಟಿಸಂಗಾವಿ, ಗುರುನಾಥ ಪೂಜಾರಿ, ಸೈಯದ್ ಮುಸ್ತಫಾ, ಶ್ರೀನಿವಾಸ ಜಮಾದಾರ, ಚಂದ್ರಶೇಖರ ಇದ್ದರು

ಜೇವರ್ಗಿ: ತಾಲ್ಲೂಕಿನ ಇಟಗಾ ಗ್ರಾಮದ ಭೀಮಾ ನದಿ ದಡದಲ್ಲಿ ಬುಧವಾರ ಆಯೋಜಿಸಿದ್ದ ಜನತಾ ಜಲಧಾರೆ ಕಾರ್ಯಕ್ರಮಕ್ಕೆ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಕೇದಾರಲಿಂಗಯ್ಯ ಹಿರೇಮಠ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸಂಕಲ್ಪದಂತೆ ರಾಜ್ಯದಾದ್ಯಂತ ಸಮಗ್ರ ನೀರಾವರಿ ಯೋಜನೆಗಳ ಜಾರಿಗೆ ಹಮ್ಮಿಕೊಂಡಿರುವ ಜನತಾ ಜಲಧಾರೆ ಕಾರ್ಯಕ್ರಮ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಗೆಲುವಿಗೆ ಸಹಕಾರಿಯಾಗಲಿದೆ. ಆ ನಿಟ್ಟಿನಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು.

ಕಲ್ಯಾಣ ಕರ್ನಾಟಕ ಪ್ರದೇಶದ ಬರದ ನಾಡಿಗೆ ಸಮಗ್ರ ನೀರಾವರಿ ಯೋಜನೆಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ಜೆಡಿಎಸ್ ಪಕ್ಷ ಪ್ರಾಮಾಣಿಕ ಪ್ರಯತ್ನ ನಡೆಸಲಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶದ ಹಳ್ಳಿಗಳ ಜನತೆ ಹಾಗೂ ಜಾನುವಾರುಗಳಿಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು

ADVERTISEMENT

ಇಟಗಾ ಗ್ರಾಮಕ್ಕೆ ಆಗಮಿಸಿದ ಜಲಧಾರೆ ರಥಯಾತ್ರೆಗೆ ಗ್ರಾಮಸ್ಥರು ಹಾಗೂ ಮಹಿಳೆಯರು ಕುಂಭ ಕಳಸ, ಬಾಜಾ ಬಜಂತ್ರಿ ಮುಖಾಂತರ ಅದ್ದೂರಿಯಾಗಿ ಸ್ವಾಗತಿಸಿದರು.

ಜೆಡಿಎಸ್ ಮುಖಂಡರಾದ ಕೇದಾರಲಿಂಗಯ್ಯ ಹಿರೇಮಠ, ಶಿವಕುಮಾರ ನಾಟೀಕಾರ, ಮಹೇಶ್ವರಿ ವಾಲಿ, ಎ.ಬಿ.ಹಿರೇಮಠ ಭೀಮಾ ನದಿಯಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ನದಿ ನೀರು ಸಂಗ್ರಹಿಸಿದರು.

ವೇದಮೂರ್ತಿ ಶರಣಯ್ಯ ಸ್ವಾಮಿ, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಖಾನಗೌಡರ, ಭಗವಂತರಾಯಗೌಡ ಅಂಕಲಗಾ, ಶಾಮರಾವ್ ಸೂರನ್, ಶಿವಾನಂದ ದ್ಯಾಮಗೊಂಡ, ಶಂಕರ ಕಟ್ಟಿಸಂಗಾವಿ, ಗುರುನಾಥ ಪೂಜಾರಿ, ಸೈಯದ್ ಮುಸ್ತಫಾ, ಶ್ರೀನಿವಾಸ ಜಮಾದಾರ, ಚಂದ್ರಶೇಖರ ಮಲ್ಲಾಬಾದ, ಸಿದ್ಧಲಿಂಗ ಸಾಹು ನಾರಾಯಣಪುರ, ಶಿವಶಂಕರ ಜವಳಗಾ, ರುದ್ರಗೌಡ ಜವಳಗಾ, ಗೊಲ್ಲಾಳಪ್ಪ ಕಡಿ, ಪ್ರದೀಪ ಕಟ್ಟಿ, ಸಿದ್ದು ಮಾವನೂರ, ಭಗವಂತರಾಯ ಕೋಣಶಿರಸಗಿ, ರಮೇಶ ಕಲ್ಲಶೆಟ್ಟಿ, ಗಫೂರಸಾಬ್ ಮಂದೇವಾಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.