ADVERTISEMENT

ಶಹಾಬಾದ್: ಅಂಬಿಗರ ಚೌಡಯ್ಯ ಜಯಂತಿ

​ಪ್ರಜಾವಾಣಿ ವಾರ್ತೆ
Published 22 ಜನವರಿ 2022, 4:36 IST
Last Updated 22 ಜನವರಿ 2022, 4:36 IST
ಶಹಾಬಾದ್ ನಗರದ ನೆಹರು ವೃತ್ತದಲ್ಲಿ ಕೋಲಿ ಸಮಾಜದ ವತಿಯಿಂದ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಹಾಗೂ ದಾಸೋಹ ದಿನ ಆಚರಿಸಲಾಯಿತು
ಶಹಾಬಾದ್ ನಗರದ ನೆಹರು ವೃತ್ತದಲ್ಲಿ ಕೋಲಿ ಸಮಾಜದ ವತಿಯಿಂದ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಹಾಗೂ ದಾಸೋಹ ದಿನ ಆಚರಿಸಲಾಯಿತು   

ಶಹಾಬಾದ್: ‘12ನೇ ಶತಮಾನದ ಶರಣರಲ್ಲಿ ಛಾಟಿ ಏಟಿನ ಶರಣನೆಂದೇ ಖ್ಯಾತಿ ಪಡೆದ ಶರಣನೆಂದರೆ ಅಂಬಿಗರ ಚೌಡಯ್ಯನವರು’ ಎಂದು ತೊನಸನಹಳ್ಳಿ(ಎಸ್) ಗ್ರಾಮದ ಅಲ್ಲಮಪ್ರಭು ಸಂಸ್ಥಾನ ಪೀಠದ ಮಲ್ಲಣ್ಣಪ್ಪ ಸ್ವಾಮಿಗಳು ಹೇಳಿದರು.

ಶುಕ್ರವಾರ ನಗರದ ನೆಹರು ವೃತ್ತದಲ್ಲಿ ಕೋಲಿ ಸಮಾಜದ ವತಿಯಿಂದ ಆಯೋಜಿಸಲಾದ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಹಾಗೂತ್ರಿವಿಧ ದಾಸೋಹಿ ಲಿಂ.ಶಿವಕುಮಾರ ಸ್ವಾಮಿಗಳ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಇದ್ದದನ್ನು ಇದ್ದ ಹಾಗೇ ಹೇಳುವ ಎದೆಗಾರಿಕೆ ಚೌಡಯ್ಯವರಲ್ಲಿತ್ತು. ಮೂಢನಂಬಿಕೆ, ಕಂದಾಚಾರದ ವಿರುದ್ಧ ತಮ್ಮ ವಚನದಲ್ಲಿ ಕಟುವಾಗಿ ಖಂಡಿಸಿದರು.ತನಗೆ ತೋಚಿದ್ದನ್ನು ತಾನು ಕಂಡದ್ದನ್ನು ಅಂದಿನ
ಸಮಾಜದ ಅಂಕು ಡೊಂಕುಗಳನ್ನು ತನ್ನ ನೇರ ನಡೆನುಡಿಗಳಿಗೆ ವಚನ ರೂಪ ನೀಡಿದ ಅದರಂತೆ ಬದುಕಿ ಇತರರಿಗೆ ಮಾರ್ಗದರ್ಶನ ತೋರಿದ ನಿಜಶರಣ ಅಂಬಿಗರ ಚೌಡಯ್ಯ ಒಬ್ಬ ಆದರ್ಶ ಮಾನವ’ ಎಂದು ಅವರು
ಹೇಳಿದರು.

ADVERTISEMENT

ತಹಸೀಲ್ದಾರ್ ಸುರೇಶ ವರ್ಮಾ ಮಾತನಾಡಿದರ.

ನಗರಸಭೆಯ ಪೌರಾಯುಕ್ತೆ ಅಂಜಲಿ ಗಿರೀಶ ಕಂಬಾನೂರ, ಉಪಾಧ್ಯಕ್ಷೆ ಸಲೀಮಾಬೇಗಂ, ಅಣವೀರ ಇಂಗಿನಶೆಟ್ಟಿ, ನಾಗರಾಜ ಮೇಲಗಿರಿ, ಪಿಐ ಸಂತೋಷ ಹಳ್ಳೂರ್,ಕೋಲಿ ಸಮಾಜದ ಅಧ್ಯಕ್ಷ ಶಿವಕುಮಾರ ತಳವಾರ, ನಿಂಗಣ್ಣ ಹುಳಗೋಳಕರ್, ಶಿವಕುಮಾರ ತಳವಾರ,ತಿಪ್ಪಣ್ಣ ನಾಟೇಕಾರ, ಲೋಹಿತ್ ಮಳಖೇಡ, ಪರಮಾನಂದ ಯಲಗೋಡಕರ್, ಮೌನೇಶ ಕೋಡಿ, ವಿಶ್ವನಾಥ ಖಾನಾಪೂರ, ನಾಗರಾಜ
ಯಡ್ರಾಮಿ, ಶರಣು ಸರಡಗಿ, ಹಣಮಂತ ಹುಳಗಲ್, ಪ್ರಶಾಂತ ಹದನೂರ, ಅಜಯ ಸರಡಗಿ, ಮಹೇಶ ಏಲೇರಿ, ಮಲ್ಲಿಕಾರ್ಜುನ ನಾಟೇಕಾರ, ಸಮಾಜದ ಮುಖಂಡರಾದ ದೇವೆಂದ್ರಪ್ಪ ಯಲಗೋಡಕರ್, ಕಾಶಣ್ಣ ಚನ್ನೂರ್, ಅಣ್ಣಪ್ಪ ದಸ್ತಾಪೂರ, ಕನಕಪ್ಪ ದಂಡಗುಲಕರ್, ಶರಣು ಪಗಲಾಪೂರ,
ಪಾರ್ವತಿ ಪವಾರ, ಸದಾನಂದ ಕುಂಬಾರ, ಸಾಬೇರಾಬೇಗಂ, ಮಹೇಂದ್ರ ಕೋರಿ ಸೇರಿದಂತೆ ಸಮಾಜದ ಮುಖಂಡರು, ಗ್ರಾಮಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.