
ಸೇಡಂ: ‘ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತದಲ್ಲಿದ್ದರೂ ಸಹ ಜನರ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಸಾಧ್ಯವಾಗಿಲ್ಲ. ಮುಧೋಳ ಸೇರಿದಂತೆ ಸುತ್ತಲಿನ ಜನರು ಸಮಸ್ಯೆಗಳೊಂದಿಗೆ ಜನರು ಜೀವನ ನಡೆಸುತ್ತಿದ್ದಾರೆ’ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಬಾಲರಾಜ್ ಗುತ್ತೇದಾರ ಆರೋಪಿಸಿದ್ದಾರೆ.
ತಾಲ್ಲೂಕಿನ ಮುಧೋಳ ಗ್ರಾಮದಲ್ಲಿ ಕಾರ್ಯಕರ್ತರು ಹಾಗೂ ಸಾರ್ವಜನಿಕರ ಜೊತೆಗೆ ಸಭೆ ನಡೆಸಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಮಾತನಾಡಿದರು.
‘ಮುಧೋಳ ದೊಡ್ಡ ಗ್ರಾಮವಾಗಿದ್ದು, ಸಮುದಾಯ ಆರೋಗ್ಯದ ಕೇಂದ್ರದಲ್ಲಿ ವೈದ್ಯರ ಕೊರತೆಯಿದೆ. ಪೋಸ್ಟ್ ಮಾರ್ಟಂ ಕೋಣೆ ಇಲ್ಲ, ಸಮರ್ಪಕವಾಗಿ ಅಂಬುಲೆನ್ಸ್ ಇಲ್ಲ, ವಿವಿಧ ಸಾಮಾಗ್ರಿಗಳ ಕೊರತೆಯಿಂದ ಜನರಿಗೆ ಸರ್ಕಾರದಿಂದ ಚಿಕಿತ್ಸೆ ಸಿಗುತ್ತಿಲ್ಲ. ಅಲ್ಲದೆ ಕಳ್ಳತನ ಪ್ರಕರಣಗಳು ಹೆಚ್ಚು ನಡೆಯುತ್ತಿವೆ. ಆದರೂ ಪೊಲೀಸ್ ಇಲಾಖೆ ಆರೋಪಿಗಳನ್ನು ಹಿಡಿಯಲು ಸಾಧ್ಯವಾಗಿಲ್ಲ’ ಎಂದು ದೂರಿದರು.
ಬಸರೆಡ್ಡಿ ಕೋಡಿಗಂಟಿ, ವೆಂಟಪ್ಪ, ನಾಗಪ್ಪ ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ಸೇರ್ಪಡೆಯಾದರು. ಮುಖಂಡರಾದ ಶಿವಶಂಕರಯ್ಯ ಸ್ವಾಮಿ, ಶಿವರಾಮರೆಡ್ಡಿ, ಹೇಮಂತ ಶಹಾ, ಜಗಧೀಶ ಸಜ್ಜನ, ಮಹೇಶ ತಳವಾರ, ನರಸಪ್ಪ, ಕೃಷ್ಣ ಗುತ್ತೇದಾರ, ಸೇವಾನಾಯಕ್, ಭಾಸ್ಕರ್ ರೆಡ್ಡಿ, ಮಹೇಂದ್ರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.