ADVERTISEMENT

ಕೆ–ಸೆಟ್‌ ಪರೀಕ್ಷೆಗೆ 12 ಸಾವಿರ ಅಭ್ಯರ್ಥಿಗಳು

ಕಲಬುರ್ಗಿಯ 15 ಕೇಂದ್ರಗಳಲ್ಲಿ ನಾಳೆ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2020, 6:27 IST
Last Updated 26 ಸೆಪ್ಟೆಂಬರ್ 2020, 6:27 IST
ಗುಲಬರ್ಗಾ ವಿವಿ ಆಡಳಿತ ಭವನ
ಗುಲಬರ್ಗಾ ವಿವಿ ಆಡಳಿತ ಭವನ   

ಕಲಬುರ್ಗಿ: ಕರ್ನಾಟಕ ಉಪನ್ಯಾಸಕರ ಅರ್ಹತಾ ಪರೀಕ್ಷೆ (ಕೆ–ಸೆಟ್‌) ಸೆ.27ರಂದು ನಗರದ 15 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, 12,361 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ.

ಪರೀಕ್ಷೆಯು ಒಟ್ಟು 41 ವಿಷಯಗಳಿಗೆ ನಡೆಯಲಿದ್ದು, ಪ್ರಥಮ ಮತ್ತು ದ್ವಿತೀಯ ಪತ್ರಿಕೆಯು ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿದೆ. ಪ್ರಶ್ನೆಗಳು ಬಹು ಆಯ್ಕೆಯಿಂದ ಕೂಡಿರುತ್ತದೆ.

ವಿದ್ಯಾರ್ಥಿಗಳು ತಮ್ಮ ಪರೀಕ್ಷಾ ಕೇಂದ್ರ ಹಾಗೂ ಪರೀಕ್ಷಾ ಕೊಠಡಿಗಳ ಮಾಹಿತಿಗೆ http//kset.uni_mysore.ac.in ಸಂಪರ್ಕಿಸಬಹುದು.

ADVERTISEMENT

ಗುಲಬರ್ಗಾ ವಿಶ್ವವಿದ್ಯಾಲಯವು ಅಭ್ಯರ್ಥಿಗಳಿಗಾಗಿ kset.gukonline.in ಜಾಲತಾಣ ಆರಂಭಿಸಿದ್ದು, ಅಭ್ಯರ್ಥಿಗಳು ಉಪ ಕೇಂದ್ರ ಹಾಗೂ ಬ್ಲಾಕ್‌ ಸಂಖ್ಯೆಯ ಮಾಹಿತಿಯನ್ನು ಇಲ್ಲಿಂದ ಪಡೆಯಬಹುದು ಎಂದು ಕೆ–ಸೆಟ್‌ ಗುಲಬರ್ಗಾ ಕೇಂದ್ರದ ನೋಡಲ್‌ ಅಧಿಕಾರಿ ಪ್ರೊ. ಚಂದ್ರಕಾಂತ ಕೆಳಮನಿತಿಳಿಸಿದ್ದಾರೆ.

ಗುಲಬರ್ಗಾ ವಿಶ್ವವಿದ್ಯಾಲಯ ಸೇರಿದಂತೆ ನಗರದ 15 ಉಪಕೇಂದ್ರಗಳಲ್ಲಿ ಈ ಪರೀಕ್ಷೆ ನಡೆಯಲಿದೆ. ಸರ್ಕಾರಿ ಪದವಿ ಮಹಾವಿದ್ಯಾಲಯ, ನೂತನ ಪದವಿ ಮಹಾವಿದ್ಯಾಲಯ, ವಿ.ಜಿ. ಮಹಿಳಾ ಮಹಾವಿದ್ಯಾಲಯ, ಎಂ.ಎಸ್‌.ಐ. ಮಹಾವಿದ್ಯಾಲಯ, ಎಸ್.ಬಿ. ವಿಜ್ಞಾನ ಮಹಾವಿದ್ಯಾಲಯ, ಕಲಾ ಮಹಾವಿದ್ಯಾಲಯ, ವಾಣಿಜ್ಯ ಮಹಾವಿದ್ಯಾಲಯ, ಎಸ್.ಬಿ. ಶಿಕ್ಷಣ ಸಂಸ್ಥೆ, ಗೋದುತಾಯಿ ಎಂಜಿನಿಯರಿಂಗ್ ಕಾಲೇಜು, ಎನ್.ವಿ. ಮಹಾವಿದ್ಯಾಲಯ, ಪಿ.ಡಿ.ಎ ಎಂಜಿನಿಯರಿಂಗ್, ರೇಶ್ಮಿ ಮಹಾವಿದ್ಯಾಲಯ, ಡಾ. ಅಂಬೇಡ್ಕರ್‌ ಮಹಾವಿದ್ಯಾಲಯ, ಹೋಮಿ ಇರಾನಿ ಕಾಲೇಜುಗಳು ಉಪ ಪರೀಕ್ಷಾ ಕೇಂದ್ರಗಳಾಗಿವೆ.

ಎಲ್ಲ ಅಭ್ಯರ್ಥಿಗಳು ಬೆಳಿಗ್ಗೆ 8 ಗಂಟೆಗೆ ಪರೀಕ್ಷೆ ಕೇಂದ್ರದಲ್ಲಿ ಹಾಜರಾಗಬೇಕು. ಕಡ್ಡಾಯವಾಗಿ ಫೇಸ್ ಮಾಸ್ಕ್ ಧರಿಸಿರಬೇಕು. ಪರೀಕ್ಷೆಯ ಪ್ರವೇಶ ಪತ್ರ ತರಬೇಕು. ಪರೀಕ್ಷಾ ಪ್ರವೇಶ ಪತ್ರ ಇರದಿದ್ದರೆ ಅಭ್ಯರ್ಥಿಗಳು ತಾವು ಅರ್ಜಿ ಶುಲ್ಕ ಸಂದಾಯ ಮಾಡಿದ ರಶೀದಿ, ವಿಳಾಸದ ಧೃಡೀಕರಣ ಹಾಗೂ ಪಾಸ್ ಪೋರ್ಟ್‌ ಅಳತೆಯ ಭಾವಚಿತ್ರ ಲಗತ್ತಿಸಿದ ಗುರುತಿನ ಚೀಟಿ ಹಾಗೂ ಸೂಕ್ತ ಕಾರಣಗಳೊಂದಿಗೆ ನೋಡಲ್ ಅಧಿಕಾರಿಗಳಿಗೆ ಮನವಿ ಸಲ್ಲಿಸಬೇಕು. ದಾಖಲಾತಿ ಮನದಟ್ಟಾದ ನಂತರ ಪರೀಕ್ಷೆ ಪ್ರವೇಶ ಪತ್ರ ವಿತರಿಸಲಾಗುವುದು ಎಂದು ಕೆಳಮನಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.