ADVERTISEMENT

ಕಲಬುರಗಿ–ಅಫಜಲಪುರ ರಸ್ತೆಯಲ್ಲಿ ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಸಾವು

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2025, 14:07 IST
Last Updated 11 ಡಿಸೆಂಬರ್ 2025, 14:07 IST
   

ಕಲಬುರಗಿ: ತಾಲ್ಲೂಕಿನ ಹಾರುತಿ ಹಡಗಿಲ ಸಮೀಪ ಸಂಭವಿಸಿದ ಕಲಬುರಗಿ–ಅಫಜಲಪುರ ರಸ್ತೆಯಲ್ಲಿ ಗುರುವಾರ ಮಧ್ಯಾಹ್ನ ಸಂಭವಿಸಿದ ಸರಣಿ ಅಪಘಾತದಲ್ಲಿ ವೃದ್ಧ ದಂಪತಿ ಸೇರಿದಂತೆ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅಫಜಲಪುರ ಕಡೆಯಿಂದ ಕಲಬುರಗಿಯತ್ತ ಬರುತ್ತಿದ್ದ ಜೀಪ್‌ ಹಾಗೂ ಕಲಬುರಗಿಯಿಂದ ಅಫಜಲಪುರದತ್ತ ಹೊರಟ್ಟಿದ್ದ ಕೆಕೆಆರ್‌ಟಿಸಿ ಬಸ್‌ ನಡುವೆ ಮೊದಲಿಗೆ ಅಪಘಾತ ಸಂಭವಿಸಿದೆ. ಬಳಿಕ ಅಪಘಾತಕ್ಕೀಡಾದ ಬಸ್‌ಗೆ ಹಿಂದಿನಿಂದ ಬಂದ ಮತ್ತೊಂದು ಬಸ್‌ ಕೂಡ ಡಿಕ್ಕಿ ಹೊಡೆದಿದೆ.

ಅಪಘಾತದಲ್ಲಿ ಜೀಪ್‌ನಲ್ಲಿದ್ದ ಅಫಜಲಪುರ ತಾಲ್ಲೂಕಿನ ತೆಲ್ಲೋಣಗಿ ಗ್ರಾಮದ ಚಂದ್ರಕಾಂತ ಶಿವರಾಯ (80), ಸುಲೋಚನಾ ಚಂದ್ರಕಾಂತ (70), ಮಿಟ್ಟುಸಾಬ್‌ ಪಟೇಲ್‌ (35) ಮೃತರು. ಜೀಪ್‌ನಲ್ಲಿ ಪ್ರಯಾಣಿಸುತ್ತಿದ್ದ ಅದೇ ಊರಿನ ಶ್ರೀಶೈಲ್‌ ಭೂತಾಳೆ ಗಾಯಗೊಂಡಿದ್ದಾರೆ.

ADVERTISEMENT

ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಘತ್ತರಗಾದ ವಿಜಯಲಕ್ಷ್ಮಿ, ಬಂದರವಾಡದ ಗುರುದೇವಿ ಅವರು ಗಾಯಗೊಂಡಿದ್ದಾರೆ.

ಘಟನಾ ಸ್ಥಳಕ್ಕೆ ಕಲಬುರಗಿ ನಗರ ಪೊಲೀಸ್‌ ಕಮಿಷನರ್‌ ಶರಣಪ್ಪ ಎಸ್‌.ಡಿ., ಸಂಚಾರ ವಿಭಾಗದ ಎಸಿಪಿ ಸುಧಾ ಆದಿ, ಸಂಚಾರ ಪೊಲೀಸ್‌ ಠಾಣೆ–2ರ ಇನ್‌ಸ್ಪೆಕ್ಟರ್‌ ಶಕೀಲ್‌ ಅಂಗಡಿ ಸೇರಿದಂತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಗಾಯಾಳುಗಳನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.