ADVERTISEMENT

ಕಲಬುರಗಿ: ವಧು–ವರರ ಸಮಾವೇಶ, ಪ್ರತಿಭಾ ಪುರಸ್ಕಾರ ಪ್ರದಾನ ಫೆ.1ರಂದು

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2025, 7:05 IST
Last Updated 17 ಡಿಸೆಂಬರ್ 2025, 7:05 IST
ಸೂರ್ಯಕಾಂತ ಗುಡ್ಡಡಗಿ
ಸೂರ್ಯಕಾಂತ ಗುಡ್ಡಡಗಿ   

ಕಲಬುರಗಿ: ಮಾತಾ ಮಾಣಿಕೇಶ್ವರಿ ಕೋಲಿ, ಕಬ್ಬಲಿಗ (ಗಂಗಾಮತ) ಸಮಾಜದ ವಧು–ವರರ ಮಾಹಿತಿ ಸೇವಾ ಸಂಘದಿಂದ ನಗರದಲ್ಲಿ 2026ರ ಫೆಬ್ರುವರಿ 1ರಂದು ವಧು–ವರರ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಸೂರ್ಯಕಾಂತ ಗುಡ್ಡಡಗಿ ಹೇಳಿದರು.

ಇಲ್ಲಿನ ಸ್ವಾಮಿ ವಿವೇಕಾನಂದ ನಗರದ ಕಸ್ತೂರಿಬಾಯಿ ಬುಳ್ಳಾ ಸಾಂಸ್ಕೃತಿಕ ಸಭಾಭವನದಲ್ಲಿ ಅಂದು ಬೆಳಿಗ್ಗೆ 11 ಗಂಟೆಗೆ ನಡೆಯುವ ಸಮಾವೇಶದಲ್ಲಿ ಹಾವೇರಿಯ ನರಸಿಪುರದ ಅಂಬಿಗರ ಚೌಡಯ್ಯ ಗುರುಪೀಠದ ಶಾಂತಭೀಷ್ಮ ಸ್ವಾಮೀಜಿ ಸಾನ್ನಿಧ್ಯ ವಹಿಸುವರು ಎಂದು ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ತಿಳಿಸಿದರು.

‘ಸಮುದಾಯದ ಬಾಂಧವರು ಇದರ ಉಪಯೋಗ ಪಡೆಯಬೇಕು. ತಮ್ಮ ಮಕ್ಕಳ ಚಿತ್ರ ಸಹಿತ ಮಾಹಿತಿಯನ್ನು ಉಚಿತವಾಗಿ ನಮ್ಮ ಕಚೇರಿಗೆ ತಲುಪಿಸಬಹುದು’ ಎಂದರು.

ADVERTISEMENT

‘ಅದೇ ದಿನ ನಮ್ಮ ಸಮಾಜದ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಸಾಧಕರನ್ನು ಸನ್ಮಾನಿಸಲಾಗುವುದು. ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರಥಮ ₹5 ಸಾವಿರ, ದ್ವಿತೀಯ ₹3 ಸಾವಿರ ಬಹುಮಾನ ನೀಡಲಾಗುವುದು. ವಧು–ವರರ ನೋಂದಣಿ ಹಾಗೂ ಪ್ರತಿಭಾ ಪುರಸ್ಕಾರಕ್ಕೆ ನೋಂದಣಿಗೆ ಜನವರಿ 10 ಕೊನೆಯ ದಿನವಾಗಿದೆ’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬಾಬು ಜಮಾದಾರ, ಭೀಮರಾಯ ಐನಾಪುರ, ಸೈಬಣ್ಣ ವಡಗೇರಿ, ಬಸವರಾಜ ನಾಟಿಕಾರ, ರಮೇಶ ದಾಸ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.