ಪೊಲೀಸ್
ಸಾಂದರ್ಭಿಕ ಚಿತ್ರ
ಕಲಬುರಗಿ: ಇಲ್ಲಿಗೆ ಸಮೀಪದ ಕಲಬುರಗಿಯ ಕೇಂದ್ರ ಕಾರಾಗೃಹದಲ್ಲಿ ಗುರುವಾರ ರಾತ್ರಿ ಕೈದಿಗಳ ಮಧ್ಯೆ ಹೊಡೆದಾಟ ನಡೆದಿದೆ.
ಗಲಾಟೆಯಲ್ಲಿ ಕೈದಿಯೊಬ್ಬರು ಮತ್ತೊಬ್ಬ ಕೈದಿಯ ಕತ್ತಿಗೆ ಹರಿತ ವಸ್ತುವಿನಿಂದ ಇರಿದಿದ್ದಾರೆ. ಇಸ್ಮಾಯಿಲ್ ಮೌಲಾನಾಸಾಬ್ (37) ಗಾಯಗೊಂಡ ಕೈದಿ. ಹಸನ್ ಶೇಖ ತಂದೆ ಇಬ್ರಾಹಿಂ ಶೇಖ (48) ಹಲ್ಲೆ ನಡೆಸಿದ ಕೈದಿ.
ಗಾಯಗೊಂಡಿರುವ ಕೈದಿ ಇಸ್ಲಾಯಿಲ್‌ನನ್ನು ಕಲಬುರಗಿ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಹುಬ್ಬಳ್ಳಿ ಮೂಲದ ಇಸ್ಮಾಯಿಲ್ ಮೌಲಾನಾಸಾಬ್ ಪೋಕ್ಸೊ ಪ್ರಕರಣದಲ್ಲಿ ಸಜಾಬಂದಿಯಾಗಿದ್ದಾರೆ. ಹಸನ್ ಶೇಖ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣದಲ್ಲಿ ಸಜಾಬಂದಿ ಕೈದಿಯಾಗಿದ್ದಾರೆ.
ಈ ಕುರಿತು ಕಲಬುರಗಿ ಕಮಿಷನರೆಟ್ ವ್ಯಾಪ್ತಿಯ ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.