ADVERTISEMENT

108 ಸಿಬ್ಬಂದಿ ನಿಷ್ಕಾಳಜಿಯಿಂದ ಮಗು ಸಾವು: ಆರೋಪ

​ಪ್ರಜಾವಾಣಿ ವಾರ್ತೆ
Published 25 ಜುಲೈ 2023, 12:31 IST
Last Updated 25 ಜುಲೈ 2023, 12:31 IST
ಶಹಾಪುರದಲ್ಲಿ ಭೀಮ ಆರ್ಮಿ ಏಕತಾ ಮಿಷನ್ ಸಮಿತಿ ಸದಸ್ಯರು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು
ಶಹಾಪುರದಲ್ಲಿ ಭೀಮ ಆರ್ಮಿ ಏಕತಾ ಮಿಷನ್ ಸಮಿತಿ ಸದಸ್ಯರು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು   

ಶಹಾಪುರ: ‘ತಾಲ್ಲೂಕಿನ ಶಿರವಾಳ ಪ್ರಾಥಮಿಕ ಆರೋಗ್ಯದ ಕೇಂದ್ರದ 108 ಸಿಬ್ಬಂದಿ ಹಾಗೂ ಶುಶ್ರೂಷಕರು ನಿಷ್ಕಾಳಜಿ ತೋರಿದ್ದರಿಂದ ಮಗು ಮೃತಪಟ್ಟಿದೆ’ ಎಂದು ಆರೋಪಿಸಿ ತಹಶೀಲ್ದಾರ್‌ ಕಚೇರಿ ಎದುರು ಭೀಮ ಆರ್ಮಿ ಏಕತಾ ಮಿಷನ್ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

‘ಚಿತ್ತಾಪುರ ತಾಲ್ಲೂಕಿನ ಕೊಲ್ಲೂರ ಗ್ರಾಮದಿಂದ ಶಿರವಾಳ ಗ್ರಾಮವು 12 ಕಿ.ಮೀ ಆಗುತ್ತದೆ. ತುರ್ತು ಸೇವೆಗಾಗಿ ಬಳಸುವ 108 ಸಿಬ್ಬಂದಿ ದೂರವಾಣಿ ಕರೆ ಮಾಡಿದ ನಂತರ ಒಂದು ಗಂಟೆ ತಡವಾಗಿ ಬಂದಿದ್ದಾರೆ. ಹೆರಿಗೆಯಾದ ಮೇಲೆ ಸರಿಯಾದ ಉಪಚಾರ ಸಿಗದೇ ಮಗು ಅಸುನೀಗಿದೆ. ಇದಕ್ಕೆ ಸಿಬ್ಬಂದಿಯೇ ಕಾರಣ’ ಎಂದು ದೂರಿದರು.

ಸಮಿತಿಯ ಪ್ರಮುಖರಾದ ಶರಣುರಡ್ಡಿ ಹತ್ತಿಗುಡೂರ, ಬಸಲಿಂಗಪ್ಪ ಶಿರವಾಳ, ಅಮರೇಶ ದೋರನಹಳ್ಳಿ, ವಿದ್ಯಾಸಾಗರ, ವಿನೋದ, ಸಚಿನ್‌ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.