ADVERTISEMENT

ಕಲಬುರಗಿ | ಸಿಯುಕೆ: ಯುಜಿಸಿ, ಜೆಆರ್‌ಎಫ್, ನೆಟ್ ತರಬೇತಿ ಕಾರ್ಯಗಾರ

​ಪ್ರಜಾವಾಣಿ ವಾರ್ತೆ
Published 5 ಮೇ 2025, 13:54 IST
Last Updated 5 ಮೇ 2025, 13:54 IST
ಕಡಗಂಚಿಯ ಸಿಯುಕೆ ಆವರಣದಲ್ಲಿ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಜಿ.ಆರ್. ಅಂಗಡಿ ಮಾತನಾಡಿದರು
ಕಡಗಂಚಿಯ ಸಿಯುಕೆ ಆವರಣದಲ್ಲಿ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಜಿ.ಆರ್. ಅಂಗಡಿ ಮಾತನಾಡಿದರು   

ಕಲಬುರಗಿ: ‘ಯುಜಿಸಿ–ನೆಟ್‍ನಲ್ಲಿ ಉತ್ತೀರ್ಣರಾಗಲು ಕೇಂದ್ರೀಕೃತ ಅಧ್ಯಯನ ಬಹಳ ಮುಖ್ಯ’ ಎಂದು ಸಿಯುಕೆ ಶಿಕ್ಷಣ ನಿಕಾಯದ ಡೀನ್ ಪ್ರೊ. ಜಿ.ಆರ್. ಅಂಗಡಿ ಹೇಳಿದರು.

ಆಳಂದ ತಾಲ್ಲೂಕಿನ ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಯುಜಿಸಿ, ಜೆಆರ್‌ಎಫ್, ನೆಟ್ ತರಬೇತಿ ಕಾರ್ಯಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಜೆಆರ್‌ಎಫ್, ನೆಟ್ ಪರೀಕ್ಷೆಯ ತಯಾರಿಗಾಗಿ ಪ್ರತಿದಿನ ಕನಿಷ್ಠ ಎರಡು ಗಂಟೆಗಳ ಕಾಲ ನಿರಂತರ ತಯಾರಿ ಅತ್ಯಗತ್ಯ. ನೀವು ಅದನ್ನು ಒಂದು ತಿಂಗಳು ಮಾಡಿದರೆ ಖಂಡಿತವಾಗಿಯೂ ನೆಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತೀರಿ. ಪ್ರತಿಯೊಬ್ಬ ವಿದ್ಯಾರ್ಥಿಯು ನಿಮ್ಮ ಪಿಜಿ ಪೂರ್ಣಗೊಳಿಸುವ ಮೊದಲು ಜೆಆರ್‌ಎಫ್ ಅಥವಾ ನೆಟ್‌ನಲ್ಲಿ ಉತ್ತೀರ್ಣರಾಗುವ ಗುರಿಯನ್ನು ಹೊಂದಿರಬೇಕು. ನೀವು ಶಿಕ್ಷರಾಗಲು ಮತ್ತು ಪ್ರತಿಷ್ಠಿತ ಸಂಸ್ಥೆಗಳಲ್ಲಿ ಪಿಎಚ್‍.ಡಿ ಮಾಡಲು ಬಯಸಿದರೆ ಹೆಚ್ಚಿನ ಶೇಕಡಾವಾರು ಪ್ರಮಾಣದಲ್ಲಿ ಜೆಆರ್‌ಎಫ್‍ನಲ್ಲಿ ಉತ್ತೀರ್ಣರಾಗಬೇಕು’ ಎಂದರು.

ADVERTISEMENT

ಶಿಕ್ಷಣ ವಿಭಾಗದ ಇಬ್ಬರು ಜೂನಿಯರ್ ರಿಸರ್ಚ್ ಫೆಲೊಗಳಾದ ದುರ್ಗಾ ಪ್ರಸಾದ್ ಮತ್ತು ಅಶ್ವಿನ್, ಜೆಆರ್‌ಎಫ್, ನೆಟ್ ಪರೀಕ್ಷೆಯ ತಮ್ಮ ಯಶಸ್ಸಿನ ಅನುಭವಗಳನ್ನು ಹಂಚಿಕೊಂಡರು.

ಸಂಯೋಜಕ ಎನ್. ಅಮರೇಶ್ವರನ್ ಸ್ವಾಗತಿಸಿ, ನಿರೂಪಿಸಿದರು. ಮಯೂರ್ ಪೂಜಾರಿ ವಂದಿಸಿದರು. ಶಿಕ್ಷಣ ಇಲಾಖೆಯ ಅಧ್ಯಾಪಕರಾದ ಆಶಾಲತಾ, ನಿಶಾ ಪ್ರಜಾಪತಿ, ಶ್ರೀದೇವಿ, ಸಿ. ಮಂಡಲ್, ಬಿ.ಪಿ. ರೆಡ್ಡಿ, ಜ್ಯೋತ್ಸ್ನಾ, ಸಂತೋಷ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.