ಕಲಬುರಗಿ: ಈ ಭಾಗದ ಪ್ರಸಿದ್ಧ ಸೂಫಿಸಂತ ಹಜರತ್ ಖಾಜಾ ಗರೀಬ್ ನವಾಜರ 621ನೇ ಉರುಸ್ ಅಂಗವಾಗಿ ಶನಿವಾರ ಸಂಜೆ ಸಾಂಪ್ರದಾಯಿಕ ಧ್ವಜಾರೋಹಣ ನೆರವೇರಿಸಲಾಯಿತು.
ದರ್ಗಾದ 11 ಮೆಟ್ಟಿಲುಗಳ ಪ್ರದೇಶದಲ್ಲಿ ದರ್ಗಾದ ಸಜ್ಜಾದೆ ನಶೀನ್ ಸೈಯದ್ ಮುಹಮ್ಮದ್ ಅಲಿ ಅಲ್–ಹುಸೇನಿ ಧ್ವಜಾರೋಹಣ ವಿಧಿವಿಧಾನ ಪೂರೈಸಿದರು. ನಂತರ ವಿಶೇಷ ಪ್ರಾರ್ಥನೆ, ಭಕ್ತರಿಗೆ ಪ್ರಸಾದ ವಿತರಣೆ ಜರುಗಿತು.
ಸೈಯದ್ ಆಲಂ ಹುಸೇನಿ, ಸೈಯದ್ ಮುಸ್ತಾಫಾ ಹುಸೇನಿ, ವಲಿ ಹುಸೇನಿ, ಶಫಿಉಲ್ಲಾ ಹುಸೇನಿ, ರಹೀಮ್‌ಉಲ್ಲಾ ಹುಸೇನಿ, ತಕಿಉಲ್ಲಾ ಹುಸೇನಿ, ಮುರ್ತಜಾ ಹುಸೇನಿ, ಅಕಿಬ್ ಹುಸೇನಿ, ಅಕ್ಬರ್ ಹುಸೇನಿ, ಮುಫ್ತಿ ಅಬ್ದುಲ್ ರಶೀದ್, ಮುಹಮ್ಮದ್ ಮಶೈಖ, ಮುಹಮ್ಮದ್ ಅಬ್ದುಲ್ ಬಸಿತ್, ವಕೀಲ ಸೈಯದ್ ವಾಜೀದ್, ಮೌಲಾನಾ ರೋಷನ್ ಖಾನ್ ಸೇರಿದಂತೆ ನೂರಾರು ಭಕ್ತರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.