ADVERTISEMENT

ಕಲಬುರಗಿ | ಬಾಬು, ಮಲಿಂಕಾ ವೇಗದ ಓಟಗಾರರು

ಕಲಬುರಗಿ ತಾಲ್ಲೂಕುಮಟ್ಟದ ದಸರಾ ಕ್ರೀಡಾಕೂಟ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2025, 4:26 IST
Last Updated 27 ಆಗಸ್ಟ್ 2025, 4:26 IST
ಕಲಬುರಗಿಯ ಚಂದ್ರಶೇಖರ ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಕಲಬುರಗಿ ತಾಲ್ಲೂಕುಮಟ್ಟದ ದಸರಾ ಕ್ರೀಡಾಕೂಟವನ್ನು ಶಾಸಕ ಅಲ್ಲಮಪ್ರಭು ಪಾಟೀಲ ಉದ್ಘಾಟಿಸಿದರು
ಕಲಬುರಗಿಯ ಚಂದ್ರಶೇಖರ ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಕಲಬುರಗಿ ತಾಲ್ಲೂಕುಮಟ್ಟದ ದಸರಾ ಕ್ರೀಡಾಕೂಟವನ್ನು ಶಾಸಕ ಅಲ್ಲಮಪ್ರಭು ಪಾಟೀಲ ಉದ್ಘಾಟಿಸಿದರು   

ಕಲಬುರಗಿ: ಚುರುಕಿನ ಓಟ ಪ್ರದರ್ಶಿಸಿ ಬಾಬು ಹಾಗೂ ಮಲಿಂಕಾ ಪ್ರಸಕ್ತ ಸಾಲಿನ ಕಲಬುರಗಿ ತಾಲ್ಲೂಕುಮಟ್ಟದ ದಸರಾ ಕ್ರೀಡಾಕೂಟದ 100 ಮೀಟರ್ ಓಟದ ಕ್ರಮವಾಗಿ ಬಾಲಕರು ಹಾಗೂ ಬಾಲಕಿಯರ ವಿಭಾಗದಲ್ಲಿ ಮೊದಲಿಗರಾಗಿ ಗುರಿ ಮುಟ್ಟಿದರು. ಈ ಮೂಲಕ ಜಿಲ್ಲಾಮಟ್ಟಕ್ಕೆ ಸ್ಥಾನ ಗಿಟ್ಟಿಸಿದರು.

ನಗರದ ಚಂದ್ರಶೇಖರ ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕ್ರೀಡಾಕೂಟದ 100 ಮೀ ಓಟದ ಬಾಲಕರ ವಿಭಾಗದಲ್ಲಿ ಶಿವಂ 2ನೇ ಸ್ಥಾನ, ಯಲ್ಲಾಲಿಂಗ 3ನೇ ಸ್ಥಾನ ಪಡೆದರು. ಬಾಲಕಿಯರ ವಿಭಾಗದಲ್ಲಿ ಸಮ್ಮುದಿ ಆನಂದ ಹಾಗೂ ಶರಣ್ಯ ಕ್ರಮವಾಗಿ 2 ಹಾಗೂ 3ನೇ ಸ್ಥಾನ ಗಳಿಸಿದರು.

ಉದ್ಘಾಟನೆ: ಶಾಸಕ ಅಲ್ಲಮಪ್ರಭು ಪಾಟೀಲ ಕ್ರೀಡಾಕೂಟ ಉದ್ಘಾಟಿಸಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಸೋಮಶೇಖರ್ ವೈ., ತರಬೇತುದಾರರಾದ ಸಂಜಯ ಬಾಣದ, ಪ್ರವೀಣ್ ಪುಣೆ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ADVERTISEMENT

ವಿವಿಧ ಕ್ರೀಡೆಗಳ ಫಲಿತಾಂಶ: ಬಾಲಕರ ವಿಭಾಗ;200 ಮೀ ಓಟ: ಬಾಬು ಸುರೇಶ–1, ಶಿವು ಶರ್ಮಾ–2; 400 ಮೀ ಓಟ: ಬಸವರಾಜ–1, ಮಹೆಬೂಬ್‌ ಪಟೇಲ್‌ –2; 800 ಮೀ ಓಟ: ಕೈಲಾಸ ಪ್ರೇಮ–1, ಮುತ್ತಪ್ಪ–2; 1,500 ಮೀ ಓಟ: ಸಾಗರ ಕುಪೇಂದ್ರ–1, ಕೈಲಾಸ–2; 5 ಸಾವಿರ ಮೀ ಓಟ: ಸಾಗರ ಕುಪ್ಪಣ್ಣ–1, ಸಮರ್ಥ ಲಕ್ಷ್ಮಣ–2; 10 ಸಾವಿರ ಮೀ ಓಟ: ಪ್ರದೀಪ ರಾಠೋಡ–1, ಪ್ರಜ್ವಲ ಪಾಟೀಲ–2; ಹೈಜಂಪ್‌: ನವೀನ –1, ವಿಲಾಸ್ –2; ಲಾಂಗ್‌ಜಂಪ್‌: ಯಲ್ಲಾಲಿಂಗ–1, ಆಕಾಶ ಪೂಜಾರಿ–2; ತ್ರಿಪಲ್‌ ಜಂಪ್‌: ಪವನ್‌–1, ಮೋದಿನ್‌ –2; ಶಾಟ್‌ಪಟ್‌: ಮೀರ್‌ಸೈಫಲ್‌ ಅಲಿ–1, ಇಸ್ಮಾಯಿಲ್‌ –2; ಡಿಸ್ಕಸ್‌ ಥ್ರೋ: ಚಿದಾನಂದ–1,  ಇಸ್ಮಾಯಿಲ್ –2; ಜಾವೆಲಿನ್‌ ಥ್ರೋ: ಪ್ರಕಾಶ ರಾಠೋಡ–1, ಇಸ್ಮಾಯಿಲ್‌–2; 4x100 ಮೀ ರಿಲೇ: ಭಾಗ್ಯವಂತ, ಅರುಣ, ನಾಗರಾಜ, ಬಾಬು ತಂಡ–1, ಬಸವರಾಜ, ಆಯುಷ್, ಸಾಗರ, ಶರಣು ತಂಡ–2; 4x400 ಮೀ ರಿಲೇ: ನಾಗರಾಜ, ಬಾಬು, ಕಿರಣ, ಸಾಗರ ತಂಡ–1, ವೀರೇಶ ಪ್ರಭು, ಅನೀಲ, ಶ್ರೀನಿವಾಸ, ಬಸವರಾಜ ತಂಡ–2; ಥ್ರೋಬಾಲ್‌: ಕ್ಯಾಂಬಲ್‌ ಶಾಲೆ–1, ಶಕೀನ್‌ ಬಾಪ್ಟಿಸ್ಟ್‌ ಶಾಲೆ–2; ವಾಲಿಬಾಲ್‌: ಅವರಾದ ತಂಡ–1, ಸಾಬಾ ತಂಡ–2;ಕಬಡ್ಡಿ: ಭಗತಸಿಂಗ್‌ ತಂಡ–1, ಇಟಗಾ ತಂಡ–2, ಯೋಗಾಸನ: ಬಸವರಾಜ–1. ಕೊಕ್ಕೊ: ಜೋಗೂರ ತಂಡ–1, ಬಸನಾಳ ತಂಡ–2.

ಬಾಲಕಿಯರ ವಿಭಾಗ: 200 ಮೀ ಓಟ: ಸಮ್ಮುದಿ ಆನಂದ–1, ಮಲಿಂಕಾ–2; 400 ಮೀ ಓಟ: ಶರಣ್ಯ–1, ಶ್ರೀನಿಧಿ–2; 800 ಮೀ ಓಟ: ಶ್ರೀನಿಧಿ–1, ಶಾಲಿನಿ–2; 1,500 ಮೀ ಓಟ: ಶಿವಾನಿ–1, ಪ್ರಣತಿ–2; 3 ಸಾವಿರ ಮೀ ಓಟ: ಪ್ರಜಾತಾ–1, ತನು–2; ಹೈಜಂಪ್‌: ಸಿಂಧು–1, ರಕ್ಷಿತಾ–2; ಲಾಂಗ್‌ಜಂಪ್‌: ಮಲಿಹ–1, ವಿಶಾಲಾಕ್ಷಿ–2; ಶಾಟ್‌ಪಟ್‌: ಮಸ್ರತ್‌ ಸುಲ್ತಾನಾ–1, ಶ್ರೀಜ್ಯೋತ್ಸನಾ–2; ಡಿಸ್ಕಸ್‌ ಥ್ರೋ: ಶ್ರೀಜ್ಯೋತ್ಸನಾ–1, ಕಾವೇರಿ–2; ಜಾವೆಲಿನ್‌ ಥ್ರೋ: ಮಸ್ರತ್ ಸುಲ್ತಾನಾ –1, ಶ್ವೇತಾ–2; 4x100 ಮೀ ರಿಲೇ: ಸಮೃದ್ಧಿ ಆನಂದ, ಶಿವಾನಿ, ಶರಣ್ಯ, ವಿಜಯಲಕ್ಷ್ಮಿ ತಂಡ–1, ಮಲ್ಲಿಕಾ, ವಜಿಯಾ, ಅಪಾರ, ಅಲ್ಲಮಾ ತಂಡ –2, 4x100 ಮೀ ರಿಲೇ: ಶರಣ್ಯ, ಶ್ರೀನಿಧಿ, ಶಿವಾನಿ, ಕಮಲಾ ತಂಡ–1, ಪ್ರಿಯಾ, ಗಾಯತ್ರಿ, ರಂಜಿತಾ, ಶಾಲಿನಿ ತಂಡ–2; ಥ್ರೋಬಾಲ್‌: ಕ್ಯಾಂಬಲ್‌ ಶಾಲೆ–1, ಶಕೀನ್ ಬಾಪ್ಟಿಸ್ಟ್‌ ಶಾಲೆ–2; ವಾಲಿಬಾಲ್‌: ಜೀವನ ಪ್ರಕಾಶ ಶಾಲೆ–1, ಶಕೀನ್‌ ಬಾಪ್ಟಿಸ್ಟ್‌ ಶಾಲೆ–2; ಕಬಡ್ಡಿ: ವಿ.ಜಿ.ಉಮೇಶ ಕಾಲೇಜು–1, ಕಡಣ್ಣಿ–2; ಯೋಗಾಸನ: ಸಿಂಚನಾ –1; ಕೊಕ್ಕೊ: ಪಟ್ಟಣ ತಂಡ–1, ಎಸ್‌ಆರ್‌ಎನ್‌ ಮೆಹತಾ ಶಾಲೆ ತಂಡ–2.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.