ADVERTISEMENT

ಚಿಂಚೋಳಿ: ಮಳೆಗೆ 107 ಮನೆಗಳ ಕುಸಿತ

​ಪ್ರಜಾವಾಣಿ ವಾರ್ತೆ
Published 30 ಜುಲೈ 2023, 5:53 IST
Last Updated 30 ಜುಲೈ 2023, 5:53 IST
ಚಿಂಚೋಳಿ ತಾಲ್ಲೂಕಿನ ಶಾದಿಪುರದಲ್ಲಿ ಮಳೆಯಿಂದ ಮನೆಯ ಗೋಡೆ ಕುಸಿದು ಬಿದ್ದಿರುವುದು
ಚಿಂಚೋಳಿ ತಾಲ್ಲೂಕಿನ ಶಾದಿಪುರದಲ್ಲಿ ಮಳೆಯಿಂದ ಮನೆಯ ಗೋಡೆ ಕುಸಿದು ಬಿದ್ದಿರುವುದು   

ಚಿಂಚೋಳಿ: ತಾಲ್ಲೂಕಿನಲ್ಲಿ ಭಾರಿ ಮಳೆಗೆ 107 ಮನೆಗಳು ಕುಸಿದಿವೆ ಎಂದು ತಹಶೀಲ್ದಾರ್‌ ವೆಂಕಟೇಶ ದುಗ್ಗನ್ ಶನಿವಾರ ತಿಳಿಸಿದ್ದಾರೆ. ಚಿಂಚೋಳಿ ಹೋಬಳಿಯಲ್ಲಿಯೇ ಅತ್ಯಧಿಕ ಮನೆಗಳು ಕುಸಿದ ವರದಿಗಳು ಬಂದಿವೆ ಎಂದರು.

ಜೂನ್ ತಿಂಗಳಲ್ಲಿ ಚಿಂಚೋಳಿ ತಾಲ್ಲೂಕಿನಲ್ಲಿ ಶೇ 10 ಮಳೆ ಕೊರತೆಯಿದ್ದರೆ, ಚಿಂಚೋಳಿ ಹೋಬಳಿಯಲ್ಲಿ ಶೇ 20 ಅಧಿಕ ಮಳೆಯಾಗಿತ್ತು. ಐನಾಪುರ ಹೋಬಳಿಯಲ್ಲಿ ಶೇ 8 ಅಧಿಕ ಮಳೆ ಸುರಿದರೆ, ಸುಲೇಪೇಟ ಹೋಬಳಿಯಲ್ಲಿ ಶೇ 52 ಮತ್ತು ಕೋಡ್ಲಿ ಹೋಬಳಿಯಲ್ಲಿ ಶೇ 13 ಮಳೆಯ ಕೊರತೆಯಿತ್ತು.
ಆದರೆ ಜುಲೈ ತಿಂಗಳಲ್ಲಿ ದಾಖಲೆಯ ಪ್ರಮಾಣದಲ್ಲಿ ಮಳೆ ಸುರಿದಿದ್ದರಿಂದ ಜನರ ಸೂರುಗಳು ನೆಲಕ್ಕುರುಳಿವೆ. ಜುಲೈನಲ್ಲಿ 358 ಮಿ.ಮೀ, ಚಿಂಚೋಳಿ ಹೋಬಳಿಯಲ್ಲಿ 421 ಮಿ.ಮೀ, ಐನಾಪುರ 382 ಮಿ.ಮೀ, ಸುಲೇಪೇಟ 250 ಮಿ.ಮೀ, ಕೋಡ್ಲಿ 335 ಮಿ.ಮೀ ಮಳೆಯಾಗಿದೆ.

ಕುಂಚಾವರಂನಲ್ಲಿ 10 ದಿನದಲ್ಲಿ 809 ಮಿ.ಮೀ ಮಳೆ: ತಾಲ್ಲೂಕಿನ ಕುಂಚಾವರಂನಲ್ಲಿ ಜುಲೈ 18ರಿಂದ ಜುಲೈ 28ರವರೆಗೆ  809.6 ಮಿ.ಮೀ ಮಳೆಯಾಗಿದೆ ಎಂದು ಜಲ ಹವಾಮಾಪನ ಕೇಂದ್ರದ ಮೂಲಗಳು ತಿಳಿಸಿವೆ.

ಚಿಂಚೋಳಿ ತಾಲ್ಲೂಕಿನ ಶಾದಿಪುರದಲ್ಲಿ ಮಳೆಯಿಂದ ಮನೆಯ ಗೋಡೆ ಕುಸಿದು ಬಿದ್ದಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT