
ಪ್ರಜಾವಾಣಿ ವಾರ್ತೆಪ್ರಾತಿನಿಧಿಕ ಚಿತ್ರ
ಕಲಬುರಗಿ: ನಗರದಲ್ಲಿ ಶನಿವಾರ ರಾತ್ರಿ 10 ನಿಮಿಷ ಮಳೆ ಸುರಿಯಿತು. ಸೇಡಂ ರಸ್ತೆಯಲ್ಲಿರುವ ಗುಲಬರ್ಗಾ ವಿಶ್ವವಿದ್ಯಾಲಯದ ಪ್ರದೇಶದಲ್ಲಿ ಜೋರು ಮಳೆ ಆಗಿದೆ. ನಂತರ ಜಗತ್ ವೃತ್ತ, ಎಸ್‌ವಿಪಿ ಸರ್ಕಲ್, ಐವಾನ್ ಇ ಶಾಹಿ ಬಡಾವಣೆಯಲ್ಲಿ ಕೆಲ ಹೊತ್ತು ಮನಿಹನಿಗಳು ಬಿದ್ದವು.
ಬಹುದಿನಗಳ ನಂತರ ಸುರಿದ ಮಳೆ ಇಳೆಗೆ ತಂಪೆರೆಯಿತು. ಭೂಮಿ ಹಸಿ ಹೋಗಿದ್ದರಿಂದ ರಸ್ತೆಗಳ ಮೇಲೆ ನೀರು ಹರಿದಾಡಲಿಲ್ಲ.
ಮೊದಲ ಮಳೆ ಕಂಡ ಮಕ್ಕಳು ಮನೆಯಿಂದ ಹೊರಗೆ ಬಂದು ಮಳೆಯಲ್ಲಿ ನೆನೆಯುತ್ತಾ ಖುಷಿಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.