ADVERTISEMENT

ಬಯಲಾಟ, ಸಣ್ಣಾಟಕ್ಕೆ ಹೊಸರೂಪ ಅಗತ್ಯ: ಅಪ್ಪಾರಾವ ಅಕ್ಕೋಣಿ

ಇಬ್ಬರು ಕಲಾವಿದರಿಗೆ ಎಸ್‌.ಬಿ.ಜಂಗಮಶೆಟ್ಟಿ, ಸುಭದ್ರಾದೇವಿ ಜಂಗಮಶೆಟ್ಟಿ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 21 ಜುಲೈ 2025, 6:48 IST
Last Updated 21 ಜುಲೈ 2025, 6:48 IST
<div class="paragraphs"><p>ಕಲಬುರಗಿಯ ವಿಶ್ವೇಶ್ವರಯ್ಯ ಭವನದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಕಲಾವಿದ ದಯಾನಂದ ಬೀಳಗಿ ಅವರಿಗೆ ‘ಶ್ರೀ ಎಸ್‌.ಬಿ.ಜಂಗಮಶೆಟ್ಟಿ’ ಹಾಗೂ ಕಲಾವಿದೆ ಗೀತಾ ಮೋಂಟಡ್ಕ ಅವರಿಗೆ ‘ಶ್ರೀಮತಿ ಸುಭದ್ರಾ ಜಂಗಮಶೆಟ್ಟಿ’ ‍ಪ್ರಶಸ್ತಿ ಪ್ರದಾನ ಮಾಡಲಾಯಿತು.&nbsp;</p></div>

ಕಲಬುರಗಿಯ ವಿಶ್ವೇಶ್ವರಯ್ಯ ಭವನದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಕಲಾವಿದ ದಯಾನಂದ ಬೀಳಗಿ ಅವರಿಗೆ ‘ಶ್ರೀ ಎಸ್‌.ಬಿ.ಜಂಗಮಶೆಟ್ಟಿ’ ಹಾಗೂ ಕಲಾವಿದೆ ಗೀತಾ ಮೋಂಟಡ್ಕ ಅವರಿಗೆ ‘ಶ್ರೀಮತಿ ಸುಭದ್ರಾ ಜಂಗಮಶೆಟ್ಟಿ’ ‍ಪ್ರಶಸ್ತಿ ಪ್ರದಾನ ಮಾಡಲಾಯಿತು. 

   

ಕಲಬುರಗಿ: ‘ಮಲೆನಾಡು, ಕರಾವಳಿ ಭಾಗದಲ್ಲಿ ಯಕ್ಷಗಾನ ಕಲೆ ಪೋಷಿಸಿ, ವಿಶ್ವಮಟ್ಟದಲ್ಲಿ ಗುರುತಿಸುವಂತೆ ಬೆಳೆಸಲಾಗುತ್ತಿದೆ. ಆದರೆ, ಈ ಭಾಗದ ಬಯಲಾಟ, ಸಣ್ಣಾಟ, ದಪ್ಪಿನಾಟ ನಶಿಸುತ್ತಿವೆ. ಅವುಗಳಿಗೆ ಹೊಸ ರೂಪ ನೀಡುವ ಕೆಲಸ ಆಗಬೇಕಿದೆ’ ಎಂದು ಕನ್ನಡನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘದ ಅಧ್ಯಕ್ಷ ಅಪ್ಪಾರಾವ ಅಕ್ಕೋಣಿ ಅಭಿಪ್ರಾಯಪಟ್ಟರು.

ನಗರದ ವಿಶ್ವೇಶ್ವರಯ್ಯ ಭವನದಲ್ಲಿ ರಂಗಸಂಗಮ ಕಲಾವೇದಿಕೆ ಆಯೋಜಿಸಿದ್ದ ‘ ಶ್ರೀ ಎಸ್‌.ಬಿ.ಜಂಗಮಶೆಟ್ಟಿ ಹಾಗೂ ಶ್ರೀಮತಿ ಸುಭದ್ರಾದೇವಿ ಜಂಗಮಶೆಟ್ಟಿ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ADVERTISEMENT

‘ಹಿಂದೆಲ್ಲ ಜಾತ್ರೆ, ಉತ್ಸವಗಳ ಸಂದರ್ಭದಲ್ಲಿ ಗ್ರಾಮಸ್ಥರೇ ನಾಟಕ ಪ್ರದರ್ಶನಕ್ಕೆ ಮೂರ್ನಾಲ್ಕು ತಿಂಗಳು ಮೊದಲೇ ಸಿದ್ಧತೆ ಮಾಡುತ್ತಿದ್ದರು. ರಂಗನಿರ್ದೇಶಕರನ್ನು ಕರೆ ತಂದು ತಾಲೀಮು ನಡೆಸುತ್ತಿದ್ದರು. ಇಂದು ಯಾವುದೇ ಹಳ್ಳಿಗಳಲ್ಲಿ ಅಂಥ ಚಟುವಟಿಕೆ ನಡೆಯುತ್ತಿಲ್ಲ. ಗ್ರಾಮೀಣ ಭಾಗದಲ್ಲಿ ನಾಟಕ ಸಂಸ್ಕೃತಿ ಬೆಳೆಸಲು ರಂಗಾಯಣ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕ್ರಮವಹಿಸಬೇಕು’ ಎಂದರು.

ಪ್ರಶಸ್ತಿ ಪ್ರದಾನ ಮಾಡಿದ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ‘ಸಜ್ಜನರ ಸಂಗ ಮಾಡಿ ಬಸವಣ್ಣನವರ ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಿದ್ದರ ಫಲವಾಗಿ ಎಸ್.ಬಿ.ಜಂಗಮಶೆಟ್ಟಿ ಸಾವಿನ ನಂತರವೂ ಸ್ಮರಣೀಯರಾಗಿದ್ದಾರೆ. ಅಂಥ ಮೇರು ಜೀವನದ ವ್ಯಕ್ತಿಯ ಹೆಸರಿನಲ್ಲಿ ಪ್ರಶಸ್ತಿ ಸ್ಥಾ‍ಪಿಸಿರುವುದು ಶ್ಲಾಘನೀಯ’ ಎಂದರು.

ಶಾಸಕ ಅಲ್ಲಮಪ್ರಭು ಪಾಟೀಲ, ಕಲಬುರಗಿ ರಂಗಾಯಣ ನಿರ್ದೇಶಕಿ ಸುಜಾತಾ ಜಂಗಮಶೆಟ್ಟಿ, ಸಾನ್ನಿಧ್ಯ ವಹಿಸಿದ್ದ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಮಾತನಾಡಿದರು. ಬಿ.ಎಚ್‌.ನಿರಗುಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಂಗ ನಿರ್ದೇಶಕ ಎಲ್‌.ಬಿ.ಶೇಖ್‌ಮಾಸ್ತರ್‌, ರಂಗಸಂಗಮ ಕಲಾವೇದಿಕೆ ಅಧ್ಯಕ್ಷೆ ಶಿವಗೀತಾ ಬಸವಪ್ರಭು ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು.

ಇದು ನನಗಿಂತಲೂ ಹೆಚ್ಚಾಗಿ ವೃತ್ತಿರಂಗಭೂಮಿಗೆ ಸಂದ ಪ್ರಶಸ್ತಿ. ಪ್ರಶಸ್ತಿ ಸ್ವೀಕರಿಸಿದ ಕೈಗಳು ನನ್ನದಾದರೂ ಇದರ ಹಿಂದೆ ಬಹಳ ಕೈಗಳ ಶ್ರಮವಿದೆ. ನನ್ನ ತಾಯಿ ಸೇರಿದಂತೆ ಆ ಎಲ್ಲರಿಗೂ ಈ ಪ್ರಶಸ್ತಿ ಅರ್ಪಣೆ
ದಯಾನಂದ ಬೀಳಗಿ ಎಸ್‌.ಬಿ.ಜಂಗಮಶೆಟ್ಟಿ ಪ್ರಶಸ್ತಿ ಪುರಸ್ಕೃತರು
ನನ್ನ ಮಿಮಿಕ್ರಿಗೆ ಪ್ರಕೃತಿಯೇ ಗುರು. ನಮ್ಮ ತಂದೆ–ತಾಯಿ ಕೊಟ್ಟ ಉತ್ತಮ ಸಂಸ್ಕಾರ ರಂಗಭೂಮಿ ನನ್ನ ಬದುಕನ್ನು ರೂಪಿಸಿವೆ. ಅದುವೇ ದಕ್ಷಿಣದ ನನ್ನನ್ನು ಪ್ರಶಸ್ತಿ ಸ್ವೀಕರಿಸಲು ಕಲಬುರಗಿಗೆ ಕರೆ ತಂದಿದೆ
ಗೀತಾ ಮೋಂಟಡ್ಕ ಸುಭದ್ರಾದೇವಿ ಜಂಗಮಶೆಟ್ಟಿ ಪ್ರಶಸ್ತಿ ಪುರಸ್ಕೃತರು
ರಂಜಿಸಿದ ಹಾಸ್ಯ ಮಿಮಿಕ್ರಿ...
ಕಲಾವಿದ ದಯಾನಂದ ಬೀಳಗಿ ಅವರು ‘ಕುಂಟ ಕೋಣ ಮೂಕ ಜಾಣ’ ನಾಟಕದ ಸನ್ನಿವೇಶವೊಂದನ್ನು ಪ್ರಸ್ತುತಪಡಿಸಿದರು. ಅವರ ಹಾಸ್ಯ ಸಂಭಾಷಣೆಗೆ ನೆರೆದಿದ್ದವರು ನಕ್ಕು ನಲಿದರು. ಕಲಾವಿದೆ ಗೀತಾ ಮೋಂಟಡ್ಕ ಪ್ರಕೃತಿಯಲ್ಲಿನ ‍ಪ್ರಾಣಿ–ಪಕ್ಷಿಗಳ ಕಲರವ ಯಾವುದೇ ಸಾಧನವಿಲ್ಲದೇ ನಾದವಾಗಿ ಹೊಮ್ಮಿಸಿ ಚಪ್ಪಾಳೆ ಗಿಟ್ಟಿಸಿದರು. ಗುಬ್ಬಚ್ಚಿ ಚಿಲಿಪಿಲಿ ಕಾಗೆ– ಹುಂಚದ ಕೂಗಾಟ ಕಂತ್ರಿ‌ನಾಯಿ‌ ಬೊಗಳುವಿಕೆ ಸಾಕಿದ ನಾಯಿಯ ಕುಂಯಿಗುಟ್ಟುವಿಕೆ ಬೆಕ್ಕು–ಮರಿ ಬೆಕ್ಕಿನ ‘ಮೀಯಾಂ’ ಸಂಭಾಷಣೆ ಮೇಕೆಯ ಕೂಗುವಿಕೆ ಪುಟಾಣಿ ಮಗುವಿನ ಅಳು ಪ್ರಯಾಣ ಆರಂಭಿಸಿದ ರೈಲಿನ ಸದ್ದು... ನೆರೆದಿದ್ದವರ ಮನಸೂರೆಗೊಂಡವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.