ADVERTISEMENT

ಕಲಬುರಗಿ | ಗಾಣಗಾಪುರ: ದತ್ತ ದೇಗುಲದ ಅರ್ಚಕರ ಮಾರಾಮಾರಿ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2024, 15:52 IST
Last Updated 17 ನವೆಂಬರ್ 2024, 15:52 IST
<div class="paragraphs"><p>ಗಾಣಗಾಪುರ ದತ್ತಾತ್ರೇಯ ದೇಸ್ಥಾನ</p></div>

ಗಾಣಗಾಪುರ ದತ್ತಾತ್ರೇಯ ದೇಸ್ಥಾನ

   

ಅಫಜಲಪುರ: ತಾಲ್ಲೂಕಿನ ಪ್ರಸಿದ್ಧ ಯಾತ್ರಾ ಸ್ಥಳ ದೇವಲಗಾಣಗಾಪುರದ ದತ್ತಾತ್ರೇಯ ಮಹಾರಾಜರ ದೇವಸ್ಥಾನ ಅರ್ಚಕರಾದ ಕಿರಣ ಪೂಜಾರಿ ಹಾಗೂ ವಲ್ಲಭ ಪೂಜಾರಿ ವಿರುದ್ಧ ದೇವಲ ಗಾಣಗಾಪುರದ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಗೌರಿ ಹುಣ್ಣಿಮೆಯಂದು ದತ್ತ ಮಹಾರಾಜರ ದರ್ಶನಕ್ಕೆ ಯಾತ್ರಿಕರನ್ನು ಸರತಿಯಲ್ಲಿ ಬಿಡುತ್ತಿರುವಾಗ ಎರಡು ಅರ್ಚಕ ಕುಟುಂಬಗಳ ಮಧ್ಯೆ ಹೊಡೆದಾಟವಾಗಿತ್ತು. ಈ ಬಗ್ಗೆ ಅರ್ಚಕರ ಕುಟುಂಬದವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿರಲಿಲ್ಲ.

ADVERTISEMENT

ದತ್ತ ಮಹಾಜರ ದರ್ಶನಕ್ಕೆ ಯಾತ್ರಿಕರ ಮಧ್ಯೆ ನೂಕುನುಗ್ಗಲು ಉಂಟಾಗಿತ್ತು. ಈ ವೇಳೆ ಇಬ್ಬರೂ ಅರ್ಚಕರು ತಮ್ಮ ತಮ್ಮ ಪರಿಚಯದ ಭಕ್ತರನ್ನು ದರ್ಶನಕ್ಕೆ ಗರ್ಭಗುಡಿಯಲ್ಲಿ ಮುಂದೆ ಬಿಡಲು ಅರ್ಚಕರಾದ ಕಿರಣ ಪೂಜಾರಿ ಹಾಗೂ ವಲ್ಲಭ ಪೂಜಾರಿ ನಡುವೆ ಜಗಳವಾಗಿ ಹೊಡೆದಾಟವೂ ನಡೆದಿತ್ತು. ಇದು ದೇವಸ್ಥಾನದ ಸಿ.ಸಿ. ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

ಎರಡು ಕುಟುಂಬಗಳ ಮಧ್ಯೆ ಆಗಾಗ ಕಲಹಗಳು ನಡೆಯುತ್ತಿದ್ದವು. ಗೌರಿ ಹುಣ್ಣಿಮೆ ದಿನ ಯಾತ್ರಿಕರನ್ನು ದರ್ಶನಕ್ಕೆ ದೇವಸ್ಥಾನದ ಒಳಗೆ ಬಿಡುವ ವಿಷಯದಲ್ಲಿಯೂ ಜಗಳವಾಗಿದೆ ಎಂದು ತಿಳಿದು ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.