ಕಾಳಗಿ: ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನಲ್ಲಿ ಸೋಮವಾರ ಬೆಳಗಿನ ಜಾವ ಸುರಿದ ಭಾರಿ ಮಳೆಯಿಂದಾಗಿ ರೌದ್ರವತಿ ನದಿ(ಹಳ್ಳ) ಪ್ರವಾಹ ಉಂಟಾಗಿದೆ.
ವಿವಿಧ ಹಳ್ಳ, ಕೊಳ್ಳಗಳ ಮೂಲಕ ಹರಿದುಬಂದ ಪ್ರವಾಹದ ನೀರು ಕಾಳಗಿಯ ನಂದೂರ ಶಿವಲಿಂಗೇಶ್ವರ (ಹಾರಕೂಡ ಲಿಂಗೈಕ್ಯ ಶ್ರೀಗಳ ಗದ್ದುಗೆ) ಮತ್ತು ನೀಲಕಂಠ ಕಾಳೇಶ್ವರ ದೇವಸ್ಥಾನಕ್ಕೆ ನೀರು ನುಗ್ಗಿದೆ. ಇದರಿಂದ ಪೂಜೆ ಹಾಗೂ ಭಕ್ತರ ದರ್ಶನಕ್ಕೆ ಅಡಚಣೆ ಮಾಡಿತ್ತು.
ಕಾಳಗಿ ತಾಲ್ಲೂಕಿನಲ್ಲಿಯೂ ಬೆಳಗಿನಜಾವ ಅಲ್ಪ ಮಳೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.