ADVERTISEMENT

ಜೈಲುಗಳಲ್ಲಿ ಅಕ್ರಮ ಚಟುವಟಿಕೆ: ತನಿಖೆ ಆರಂಭಿಸಿದ ಆನಂದ್ ರೆಡ್ಡಿ

​ಪ್ರಜಾವಾಣಿ ವಾರ್ತೆ
Published 2 ಜನವರಿ 2026, 18:20 IST
Last Updated 2 ಜನವರಿ 2026, 18:20 IST
<div class="paragraphs"><p>ಜೈಲು (ಪ್ರಾತಿನಿಧಿಕ ಚಿತ್ರ)</p></div>

ಜೈಲು (ಪ್ರಾತಿನಿಧಿಕ ಚಿತ್ರ)

   

ಕಲಬುರಗಿ: ಇಲ್ಲಿನ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಅಕ್ರಮ ಚಟುವಟಿಕೆಗಳ ಕುರಿತು ಕಾರಾಗೃಹಗಳ ಇಲಾಖೆಯ ಹೆಚ್ಚುವರಿ ಮಹಾನಿರೀಕ್ಷಕ ಪಿ.ವಿ.ಆನಂದ ರೆಡ್ಡಿ ಅವರು ಶುಕ್ರವಾರ ತನಿಖೆ ಆರಂಭಿಸಿದ್ದಾರೆ.

ಬೆಳಿಗ್ಗೆಯೇ ಬಂದ ಆನಂದ ರೆಡ್ಡಿ ನೇತೃತ್ವದ ತಂಡವು ಕಲಬುರಗಿ ಸೆಂಟ್ರಲ್‌ ಜೈಲು ಪ್ರವೇಶಿಸಿ, ತನಿಖೆ ಶುರು ಮಾಡಿದೆ.

ADVERTISEMENT

‘ಕೈದಿಗಳಿಗೆ ಮೊಬೈಲ್, ಮದ್ಯ, ಸಿಗರೇಟ್ ಹೇಗೆ ತಲುಪುತ್ತಿವೆ? ಅದರಲ್ಲಿ ಯಾರ ಕೈವಾಡವಿದೆ? ಎಲ್ಲಿ ಭದ್ರತಾ ಲೋಪವಾಗುತ್ತಿದೆ ಎಂಬೆಲ್ಲ ವಿಷಯಗಳ ಬಗೆಗೆ ತನಿಖೆ ಸಾಗಿದೆ’ ಎಂದು ಮೂಲಗಳು ಹೇಳಿವೆ.

ಅಲೋಕ್‌ ಕುಮಾರ್‌ ಭೇಟಿ ಇಂದು: ಕಲಬುರಗಿ ಕೇಂದ್ರ ಕಾರಾಗೃಹಕ್ಕೆ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಪೊಲೀಸ್‌ ಮಹಾ ನಿರ್ದೇಶಕ ಅಲೋಕ್‌ ಕುಮಾರ್‌ ಶನಿವಾರ (ಜ.3) ಭೇಟಿ ನೀಡಲಿದ್ದಾರೆ. 

ಸ್ವತಃ ಪರಿಶೀಲನೆ ನಡೆಸಿ, ತಪ್ಪಿತಸ್ಥ ಜೈಲು ಸಿಬ್ಬಂದಿ ವಿರುದ್ಧ ಕ್ರಮಕೈಗೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.