ADVERTISEMENT

ಬಿಸಿಲು ನಾಡು ಕಲಬುರಗಿಯಲ್ಲಿ ಮುಂಗಾರು ಮಳೆ‌ ಅನುಭವ: ಧಾರಾಕಾರ ಮಳೆ

​ಪ್ರಜಾವಾಣಿ ವಾರ್ತೆ
Published 21 ಮೇ 2025, 11:50 IST
Last Updated 21 ಮೇ 2025, 11:50 IST
   

ಕಲಬುರಗಿ: ನಗರವೂ ಸೇರಿದಂತೆ ‌ಜಿಲ್ಲೆಯ‌ ವಿವಿಧೆಡೆ ಬುಧವಾರ ಮಳೆ‌ ಮುಂದುವರಿದಿದೆ.

ಬೆಳಿಗ್ಗೆಯಿಂದಲೇ ಆಗಸದಲ್ಲಿ ಮೋಡಗಳು ದಟ್ಟೈಸಿ ಕತ್ತಲೆ‌ಯಂತಹ ವಾತಾವರಣ ಇತ್ತು.

ಬೆಳಿಗ್ಗೆ 10 ಗಂಟೆಯಿಂದಲೇ ಆರಂಭವಾದ ಮಳೆ ಜಿಟಿಜಿಟಿ ಮಳೆ ಅರ್ಧ ಗಂಟೆ ಸುರಿದು ಕೆಲವು ಗಂಟೆ ಬಿಡುವು ನೀಡಿತ್ತು. ಮೋಡ‌ಕವಿದ ವಾತಾವರಣ ಮುಂದುವರಿದಿತ್ತು.

ADVERTISEMENT

ಮತ್ತೆ ಮಧ್ಯಾಹ್ನ 3.30ರಿಂದ ವರಣನ‌ ಅಬ್ಬರ ಶುರುವಾಗಿದೆ. ಧಾರಾಕಾರವಾಗಿ ಮಳೆ ಸುರಿಯುತ್ತಿದೆ.

ಬಿರುಸಿನ‌ ಮಳೆಗೆ ಚರಂಡಿಗಳು ತುಂಬಿ ಹರಿದವು. ರಸ್ತೆ‌ ಮೇಲೆಲ್ಲ ನೀರು ಹರಿದು ಸ್ವಚ್ಛಗೊಂಡವು. ರಸ್ತೆ‌ ಮೇಲೆ ನೀರು ಹರಿದಿದ್ದರಿಂದ ಕೆಲವೆಡೆ ವಾಹನಗಳ‌ ಓಡಾಟಕ್ಕೆ ತೊಂದರೆ ಉಂಟಾಯಿತು. ಸತತ ಮಳೆಗೆ ಜನಜೀವನ ಅಸ್ತವ್ಯಸ್ತವಾಯಿತು.

ನಗರದ‌ ಪಿಡಿಎ ಎಂಜಿನಿಯರಿಂಗ್ ಕಾಲೇಜು ಹಾಗೂ ಹಳೇ ಜೇವರ್ಗಿ ರಸ್ತೆಯ ರೈಲ್ವೆ ಕೆಳ ಸೇತುವೆಯಲ್ಲಿ ನೀರು ಜಮಾಯಿಸಿದ್ದರಿಂದ‌ ವಾಹನಗಳ‌ ಸಂಚಾರಕ್ಕೆ ತೊಡಕಾಯಿತು.

ಮುಂಗಾರು ಪೂರ್ವ ಮಳೆಯಿಂದ ಕಲಬುರಗಿ ನಗರದಲ್ಲಿ ಮುಂಗಾರು ಮಳೆಯಂಥ ವಾತಾವರಣ ‌ಸೃಷ್ಟಿಯಾಗಿದೆ. ಕಳೆದ‌ ಮೂರ್ನಾಲ್ಕು ದಿ‌ನಗಳಿಂದ‌ ಆಗಾಗ ಸುರಿದ ಮಳೆಯಿಂದ ಬಿಸಿಲೂ ತಗ್ಗಿದೆ. ಬಿಟ್ಟು ಬಿಟ್ಟು ಸುರಿಯುತ್ತಿರುವ ಮಳೆಯಿಂದ ವಾತಾವರಣ ಸಂಪೂರ್ಣ ತಂಪಾಗಿದ್ದು, ಗರಿಷ್ಠ ಉಷ್ಣಾಂಶ 36 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದೆ.

ಕಲಬುರಗಿ ಜಿಲ್ಲೆಯಲ್ಲಿ ಮಾರ್ಚ್ 1ರಿಂದ‌ ಮೇ 21ರ ತನಕ ವಾಡಿಕೆಯಂತೆ‌ 44.8 ಮಿ.ಮೀ ಮಳೆಯಾಗಬೇಕಿತ್ತು. ಆದರೆ, ವಾಸ್ತವವಾಗಿ ಜಿಲ್ಲೆಯಲ್ಲಿ ಸರಾಸರಿ 123.7 ಮಿ‌.ಮೀ ಮಳೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.