
ಕಲಬುರಗಿ: ನಗರದ ಜನತೆಗೆ ಒಳ್ಳೆಯ ವಿದ್ಯುತ್ ಸರಬರಾಜು ನೀಡುವುದು ನಮ್ಮ ಗುರಿಯಾಗಿರುವುದರಿಂದ, ವಿದ್ಯುತ್ ಸರಬರಾಜಿನಲ್ಲಿ ಯಾವುದೇ ವ್ಯತ್ಯಯ ಉಂಟಾಗದಂತೆ ನೋಡಿಕೊಳ್ಳಲು 33 ಕೆವಿಯ 3 ಸಬ್ ಸ್ಟೇಷನ್‌ಗಳ ನಿರ್ಮಾಣ ಮಾಡುವುದಾಗಿ ಜೆಸ್ಕಾಂ ಅಧ್ಯಕ್ಷ ಪ್ರವೀಣ ಪಾಟೀಲ ಹರವಾಳ ಭರವಸೆ ನೀಡಿದರು.
ಕಲಬುರಗಿ ನಗರ ಮತ್ತು ನಗರದ ಆಸು ಪಾಸಿನಲ್ಲಿ ಜೆಸ್ಕಾಂ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ಹಾಗೂ ಲಿಂಕ್ ಲೈನ್ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು 3 ಸಬ್ ಸ್ಟೇಷನಗಳ ನಿರ್ಮಾಣಕ್ಕಾಗಿ ಮಹಾನಗರ ಪಾಲಿಕೆಗೆ ಸಂಬಂಧಪಟ್ಟ ಅಥವಾ ಕಂದಾಯ ಭೂಮಿ, ಸ್ಥಳವನ್ನು ಗುರುತಿಸಲು ಜೆಸ್ಕಾಂ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದರು.
ಇದೇ ಸಂದರ್ಭದಲ್ಲಿ ಕಲಬುರಗಿ ಹೈಕೋರ್ಟ್ ಹಿಂದುಗಡೆ ಇರುವ 110 ಕೆವಿ ಸ್ಟೇಷನ್ ನ ಕಾರ್ಯಾಚರಣೆಯ ಪರಿಶೀಲನೆ ಮತ್ತು ನಗರದ ಹೊರಪ್ರದೇಶದಲ್ಲಿ ನಡೆಯುತ್ತಿರುವ ಸೋಲಾರ್ ಪಾರ್ಕ್ ಕಾಮಗಾರಿಯನ್ನು ವೀಕ್ಷಿಸಿದರು.
ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಬಾಜಪೇಯಿ ಹಾಗೂ ಜೆಸ್ಕಾಂ ಎಂಜಿನಿಯರ್‌ಗಳು ಈ ಸಂದರ್ಭದಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.