ADVERTISEMENT

ಕಲಬುರಗಿ: ಹಣ ದುರ್ಬಳಕೆ; ಕರ್ತವ್ಯ ಲೋಪ ಆರೋಪದಡಿ ಸೇವೆಯಿಂದ ಶಿಕ್ಷಕ ಅಮಾನತು

​ಪ್ರಜಾವಾಣಿ ವಾರ್ತೆ
Published 28 ಜನವರಿ 2026, 7:02 IST
Last Updated 28 ಜನವರಿ 2026, 7:02 IST
<div class="paragraphs"><p>ಅಮಾನತು</p></div>

ಅಮಾನತು

   

ಕಲಬುರಗಿ: ತಾಲ್ಲೂಕಿನ ಸಾವಳಗಿ (ಬಿ) ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕರಾಗಿದ್ದ ನವನಾಥ ಶಿಂದೆ ಅವರನ್ನು ಕರ್ತವ್ಯ ಲೋಪ ಆರೋಪದಡಿ ಸೇವೆಯಿಂದ ಅಮಾನತುಗೊಳಿಸಿ ಕಲಬುರಗಿ ದಕ್ಷಿಣ ಬಿಇಒ ವಿಜಯಕುಮಾರ ಜಮಖಂಡಿ ಆದೇಶಿಸಿದ್ದಾರೆ.

ಸಹ ಶಿಕ್ಷಕರಾಗಿರುವ ನವನಾಥ ಶಿಂದೆ ಅವರು 2024ರ ಏಪ್ರಿಲ್‌ನಿಂದ 2025ರ ಸೆಪ್ಟೆಂಬರ್‌ ತನಕ ಪ್ರಭಾರ ಮುಖ್ಯಶಿಕ್ಷಕರಾಗಿ ಕೆಲಸ ಮಾಡಿದ್ದರು. ಈ ಅವಧಿಯಲ್ಲಿ ಹಣ ದುರ್ಬಳಕೆ ಆರೋಪ ಕೇಳಿ ಬಂದಿತ್ತು. ಇಬ್ಬರು ಶಿಕ್ಷಕರ ತನಿಖಾ ತಂಡ ರಚಿಸಲಾಗಿತ್ತು. ‘ಶಿಂದೆ ಅವರ ಅವಧಿಯಲ್ಲಿ
₹ 4.42 ಲಕ್ಷ ಹಣ ದುರ್ಬಳಕೆ, ಸರ್ಕಾರದಿಂದ ವಿದ್ಯಾರ್ಥಿಗಳ ಕಲ್ಯಾಣಕ್ಕಾಗಿ ಬಿಡುಗಡೆಯಾಗಿದ್ದ ಹಣವನ್ನು ಬೇಕಾಬಿಟ್ಟಿ ಬಳಕೆ ಮಾಡಲಾಗಿದೆ’ ಎಂದು ವರದಿಯಲ್ಲಿ ಹೇಳಲಾಗಿತ್ತು.

ADVERTISEMENT

ಅದರಂತೆ ಶಿಂದೆ ವಿರುದ್ಧ ಇಲಾಖಾ ವಿಚಾರಣೆ ಕಾಯ್ದಿರಿಸಿ, ಸೇವೆಯಿಂದ ಅಮಾನತು ಮಾಡಿ ಬಿಇಒ ಜಮಖಂಡಿ ಆದೇಶಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.